..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ಸಲಹದೆ ಬಿಡಲಾರೆ ನಿನ್ನ ಪಾದ ಸಲಹವೆ ಬಿಡಲಾರೆ
ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ
ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ
ಸಂದೇಹವಿಲ್ಲದೆ ಬಂದು ಪೊರೆದ ಮುಕುಂದ ನಿನ್ನಯ ಪಾದ 1
ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ
ದಾರಿದ್ರ್ಯಭಯವನ್ನು ದೂರ ಓಡಿಸಿದಂಥ ಮಾರಮಣನಾ ಪಾದ 2
ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು
ಕಮಲಾಕ್ಷ ನಿನ್ನಯ ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು 3
ಆರು ವೈರಿಗಳು ಮಿತಿಮೀರಿರುವರು ಕೇಳು
ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು 4
ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು
ಶಿರವತ್ಸಾಂಕಿತನಾದ ನರಸಖ ನಿನ್ನಯ ಕರುಣವ ಬೀರು 5
***