Showing posts with label ಎಷ್ಟು ಸೊಗಸು ಎಷ್ಟು ಸೊಗಸ ramesha. Show all posts
Showing posts with label ಎಷ್ಟು ಸೊಗಸು ಎಷ್ಟು ಸೊಗಸ ramesha. Show all posts

Sunday, 10 November 2019

ಎಷ್ಟು ಸೊಗಸು ಎಷ್ಟು ಸೊಗಸ ankita ramesha

by ಗಲಗಲಿಅವ್ವನವರು
ಎಷ್ಟು ಸೊಗಸು ಎಷ್ಟು ಸೊಗಸಕೃಷ್ಣರಾಯರು ಕುಳಿತ ಸಭೆಯುಅಷ್ಟದಿಕ್ಕು ಬೆಳಗಿಉತ್ಕøಷ್ಟವಾಗಿ ತೋರುವುದಮ್ಮ ಪ.

ಚದುರೆ ರುಕ್ಮಿಣಿ ಭಾಮೆಹದಿನಾರು ಸಾವಿರದನೂರು ಸುದತೆಯರೊಪ್ಪುತಿಹರುಅದ್ಭುತವಾಗಿ ಸಖಿಯೆ 1

ಜತ್ತಾದ ದೀವಿಗೆ ಎಷ್ಟುರತ್ನದ ಪ್ರಕಾಶ ಎಷ್ಟುಹಸ್ತಿಗಮನೆಯರ ಕಾಂತಿಚಿತ್ತಹರಣಮಾಡುವುದಮ್ಮ 2

ಭ್ರಾಂತಿಗೈದು ಮುಯ್ಯ ಮರೆದುನಿಂತು ಕುಳಿತು ನೋಡೋರೆಷ್ಟಕಂತುನೈಯನ ಸಭೆಯಇಂಥ ಅಂದವ ಎಲ್ಲೆ ಕಾಣೆ 3

ನಟ ನರ್ತಕರು ಎಷ್ಟುಚಟುಲಚಮತ್ಕಾರಿ ಎಷ್ಟುವಟ ಪತ್ರ ಶಾಯಿ ಕುಳಿತಸಭೆಗೆ ಸಾಟಿ ಇಲ್ಲವಮ್ಮ 4

ವೀರ ಪಾಂಡವರ ಪುಣ್ಯಯಾರು ವರ್ಣಿಸಲೊಶವಶ್ರೀರಾಮೇಶ ಒಪ್ಪುತಿಹನುಮೂರುಲೋಕ ಮಿಗಿಲಾಯಿತಮ್ಮ 5
******