ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ || ಪ ||
ನಾದ ಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆ || ಅ.ಪ ||
ಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆ || ೧ ||
ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕುಯೆಂದು ಮುತ್ತಿನಾರತಿಯೆತ್ತುವೆ || ೨ ||
ನಿನ್ನನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ್ನ ಮಹಿಮ ವಿಜಯವಿಠಲ ಕೇಳೋ ನಿನ್ನ ಭಕ್ತರ ಸೊಲ್ಲ || ೩ ||
*****
ಸದಾ ಎನ್ನ ಹೃದಯದಲ್ಲಿ
ವಾಸಮಾಡೊ ಶ್ರೀಹರಿ ||ಪಲ್ಲವಿ||
ನಾದಮೂರ್ತಿ ನಿನ್ನ ಪಾದ
ಮೋದದಿಂದ ಭಜಿಸುವೆನು ||ಅನು||
ಜ್ಞಾನವೆಂಬ ನವರತ್ನದ
ಮಂಟಪದ ಮಧ್ಯದಲಿ
ವೇಣುಲೋಲನ ಕುಳ್ಳಿರಿಸಿ
ಮೋದದಿಂದ ಭಜಿಸುವೆನು ||೧||
ಭಕ್ತಿ ರಸವೆಂಬ ಮುದ್ದು
ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು
ಮುತ್ತಿನಾರತಿ ಎತ್ತುವೆನು ||೨||
ನಿನ್ನ ನಾನು ಬಿಡುವನಲ್ಲ
ಎನ್ನ ನೀನು ಬಿಡಲು ಸಲ್ಲ
ಘನ್ನ ಮೂರುತಿ ವಿಜಯವಿಠಲ
ಕೇಳೊ ನಿನ್ನ ಭಕ್ತರ ಸೊಲ್ಲ ||೩||
*********
ರಾಗ ಪಂತುವರಾಳಿ ತಾಳ ಆದಿ (raga, taala may differ in audio)
Sada enna hrdayadalli vasamado shri hari
Nadamuni ninna pada modadinda bhajisuve
Jnanavembo navaratna mantapada madhyadali
Ganalolana kullirisi dhyanadinda bhajisuve ||1||
Bhakti rasavembo muddu manikyada arivanadi
Muktanaga beku endu muttinarati ettuve ||2||
Ninna nanu biduvanalla enna ninu bidudapalli
Pannaga shayana vijayavithala kelo ninna bhaktara solla||3||
***
pallavi
sadA enna hrdayadalli vAsamADO shrI hari
(sadA)
anupallavi
nAdamuni ninna pAda mOdadinda bhajisuvE
(sadA)
caraNam 1
jnAnavembo navaratna maNTapada madhyadali
gAnalOlana kuLLirisi dhYanadinda bhajisuvE
(sadA)
caraNam 2
bhakti rasavembO muddu mANikyada arivANAdi
muktanAga bEku endu muttinArati ettuvE
(sadA)
caraNam 3
ninna nAnu biDuvanalla enna nInu bidudapalli
pannaga shayana vijayavithala kELO ninna bhaktara solla
(sadA)
***
ವಾಸಮಾಡೊ ಶ್ರೀಹರಿ ||ಪಲ್ಲವಿ||
ನಾದಮೂರ್ತಿ ನಿನ್ನ ಪಾದ
ಮೋದದಿಂದ ಭಜಿಸುವೆನು ||ಅನು||
ಜ್ಞಾನವೆಂಬ ನವರತ್ನದ
ಮಂಟಪದ ಮಧ್ಯದಲಿ
ವೇಣುಲೋಲನ ಕುಳ್ಳಿರಿಸಿ
ಮೋದದಿಂದ ಭಜಿಸುವೆನು ||೧||
ಭಕ್ತಿ ರಸವೆಂಬ ಮುದ್ದು
ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು
ಮುತ್ತಿನಾರತಿ ಎತ್ತುವೆನು ||೨||
ನಿನ್ನ ನಾನು ಬಿಡುವನಲ್ಲ
ಎನ್ನ ನೀನು ಬಿಡಲು ಸಲ್ಲ
ಘನ್ನ ಮೂರುತಿ ವಿಜಯವಿಠಲ
ಕೇಳೊ ನಿನ್ನ ಭಕ್ತರ ಸೊಲ್ಲ ||೩||
*********
another version
ಸದಾ ಎನ್ನಾ ಹೃದಯದಲ್ಲಿ
ವಾಸ ಮಾಡೋ ಶ್ರೀ ಹರಿ ||ಸದಾ||
ನಾದಮೂರ್ತಿ ನಿನ್ನ ಪಾದ ||2||
ಮೋದದಿಂದ ಭಜಿಸುವೆ
||ಸದಾ ಎನ್ನ||
ಜ್ಞಾನವೆಂಬೋ ನವರತ್ನದ
ಮಂಟಪದ ಮಧ್ಯದಲ್ಲಿ||ಜ್ಞಾನ||
ಗಾನ ಲೋಲನ ಕುಳ್ಳಿರಿಸಿ ||2||
ಸದಾ ಧ್ಯಾನದಿಂದ ಭಜಿಸುವೆ
||ಗಾನ||
||ಸದಾ ಎನ್ನ||
ಭಕ್ತಿರಸವೆಂಬೋ ಮುತ್ತು ಮಾಣಿಕ್ಯದ
ಹರಿವಾಣದೀ ||ಭಕ್ತಿರಸ||
ಮುಕ್ತನಾಗಬೇಕು ಎಂದು||2||
ಮುತ್ತಿನಾರತಿ ಎತ್ತುವೇನೋ
||ಮುಕ್ತನಾಗ||
||ಸದಾ ಎನ್ನ||
ನಿನ್ನ ನಾನು ಬಿಡುವವನಲ್ಲ
ಎನ್ನ ನೀನು ಬಿಡಲು ಸಲ್ಲ||ನಿನ್ನ||
ಘನ್ನ ಮಹಿಮ ವಿಜಯವಿಠಲ||2||
ನಿನ್ನ ಭಕುತರ ಕೇಳೋ ಸೊಲ್ಲ
||ಘನ್ನ||
||ಸದಾ ಎನ್ನ||
********