Showing posts with label ಅಂಥವನಲ್ಲಾ ಕಾಣಿರೇ ಸಂತತ ತೃಪ್ತಾ ಪ ಹಸಿದರೆ gurumahipati ANTHAVANALLA KAANIRE SANTATA TRUPTA. Show all posts
Showing posts with label ಅಂಥವನಲ್ಲಾ ಕಾಣಿರೇ ಸಂತತ ತೃಪ್ತಾ ಪ ಹಸಿದರೆ gurumahipati ANTHAVANALLA KAANIRE SANTATA TRUPTA. Show all posts

Wednesday, 1 December 2021

ಅಂಥವನಲ್ಲಾ ಕಾಣಿರೇ ಸಂತತ ತೃಪ್ತಾ ankita gurumahipati ANTHAVANALLA KAANIRE SANTATA TRUPTA

ಕಾಖಂಡಕಿ ಶ್ರೀ ಮಹಿಪತಿರಾಯರು

ಅಂಥವನಲ್ಲಾ ಕಾಣಿರೇ ಸಂತತ ತೃಪ್ತಾ ಪ 

ಹಸಿದರೆ ಬಂದು ಬೇಡಿ ತುಸು ಹಾಲು ಕೊಳ್ಳಲರಿಯಾ ಮೊಸರಾಲು ಕುಡಿಯ ಬಲ್ಲನೇ ನಮ್ಮ ಶ್ರೀರಂಗಾ 1

 ಗಡಿಬಿಡಿಯನ್ನಾಲಾಗ ವಡನೆಂಜಿಸಾರುವ ಕಡೆವ ಬೆಣ್ಣೆಯ ಮೆಲುವನೇ 2 

ತರಳರ ಕೂಡ ಹೋಗಿ ಬರಲು ಹಾದಿ ತಪ್ಪವ ಕೇರಿ ಕೇರಿತಿರುಗಬಲ್ಲನೇ 3 

ಹೊಸ ಮೋರೆ ಕಾಣಲು ಕುಸಿದು ತಲೆ ಭಾಗುವ ವಿಷಯಕ್ಕೆ ನಿಮ್ಮ ಯಳೆವನೇ 4 

ಅಡಿಯಿಡ ವುತ-ಕಾಲ ತೊಡಕಿತಾ ಬೀಳುವಾ ತುಡುಗದಿ ಓಡ ಬಲ್ಲನೇ 5 

ಹಡೆದಾ ಮಕ್ಕಳು ನಿಮಗ ಪೊಡವಿಯೊಳಿಲ್ಲವೇನೇ ಬಿಡ ನುಡಿಗವ ಸಲ್ಲನೇ 6

ಗುರು ಮಹಿಪತಿ ಸ್ವಾಮಿ ಸರಸಾಟಕವತಾಳಿ ಚರಿಸುವ ಅಂತದೋರನೇ 7

***