Showing posts with label ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ mahipati. Show all posts
Showing posts with label ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ mahipati. Show all posts

Wednesday, 1 September 2021

ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ ಪ  


ಒಡೆದು ಹೇಳುವದಲ್ಲ ಹಿಡಿದು ತಾ ಕೊಡಲಿಕ್ಕಿಲ್ಲ ಪಡೆದುಕೊಂಡವನೆ ಬಲ್ಲ ಗೂಡಿನ ಸೊಲ್ಲ 1 

ಸಕ್ಕರಿ ಸವಿದಂತೆ ಮೂಕ ಪ್ರಕಟಿಸೇನೆಂದರೆ ಸುಖ ಯುಕುತಿಗೆ ಬಾರದು ನಿಶ್ಸಂಕ ಸುಖ ಅಲೌಕಿಕ 2 

ಮುನಿಜನರ ಹೆಜ್ಜೆಮೆಟ್ಟು ಏನೆಂದ್ಹೇಳಲಿ ನಾ ಗುಟ್ಟು ಅನುದಿನ ಮಹಿಪತಿ ಗುಟ್ಟು ಘನ ಕೈ ಗೊಟ್ಟು 3

***