Showing posts with label ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿಶಿಷ್ಟನ್ನ vijaya vittala KRISHNANNA BALU UTKRUSHTANNA VISHISHTANNA. Show all posts
Showing posts with label ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿಶಿಷ್ಟನ್ನ vijaya vittala KRISHNANNA BALU UTKRUSHTANNA VISHISHTANNA. Show all posts

Wednesday, 16 October 2019

ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿಶಿಷ್ಟನ್ನ ankita vijaya vittala KRISHNANNA BALU UTKRUSHTANNA VISHISHTANNA

 ರಾಗ ಮೋಹನ  ರೂಪಕತಾಳ 

Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 

ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿ - ।
ಶಿಷ್ಟನ್ನ ತುತಿಸಿ ತುಷ್ಟನ್ನ ॥ ಪ ॥

ಗೋಪಳ್ಳಿಯೊಳಗಂದು ನಿಂದನ್ನ ।
ಬಲುಗೋಪಿಯರ ಕೂಡ ನಂದನ್ನ ॥
ಗೋಪಿಚಂದನದಿಂದ ಬಂದನ್ನ ನಮ್ಮ ।
ಗೋಪಾಲ ವಿಷ್ಣು ಗೋವಿಂದನ್ನ ॥ 1 ॥

ಅಪಾರ ಮಹಿಮನು ಎನಿಸುವನ ।
ಭಕುತಗಾಪತ್ತು ಬರಲು ಮಾಣಿಸುವನ ॥
ತಾಪಸಿಗಳಿಗೆ ಕಾಣಿಸುವನ ।
ದಶರೂಪವ ಧರಿಸಿ ಜನಿಸುವನ ॥ 2 ॥

ರಜತಪೀಠ ಪುರವಾಸನ್ನ ಮಹ - ।
ರಜನೀಚರರ ವಿನಾಶನ್ನ ॥
ತ್ರಿಜಗದೊಳಗೆ ಪ್ರಕಾಶನ್ನ ನಮ್ಮ ।
 ವಿಜಯವಿಠ್ಠಲ ಮಾನಿಸೆನ್ನ ॥ 3 ॥
***

pallavi

kruSNanna balu utkruSNanna visiSTanna tutisi tuSTanna

caraNam 1

gOpaLLIyoLagandu nindanna balu gOpiya kUDe Anandanna
gOpi candanadinda bandanna namma gOpAla kruSNa gOvindanna

caraNam 2

ApAra mahimAnenisuvanna bhakta gApattu baralu mannisuvanna
tApasigaLige?kANisuvanna dasharUpava dharisi janisuvanna

caraNam 3

rajata pIThApura vAsanna A rajanIsharara vinAshanna
trijagadoLage prakAshanna namma vijaya viThala mannisenna
***



ಕೃಷ್ಣನ್ನ ಬಲೂತ್ಕøಷ್ಟನ್ನ ವಿಶಿಷ್ಟನ್ನ ಸ್ತುತಿಸಿ ತುಷ್ಟನ್ನ ಪ

ಗೋಪಳ್ಳಿಯೊಳಗಂದು ನಿಂದನ್ನಬಲುಗೋಪಿಯರ ಕೂಡ ನಂದನಾಗೋಪಿ ಚಂದನದಿಂದ ಬಂದನ್ನಾನಮ್ಮಗೋಪಾಲ ವಿಷ್ಣು ಗೋವಿಂದನ್ನ 1

ಅಪಾರ ಮಹಿಮ ನೆನೆಸುವನ್ನಾಭüಕುತ ಗಾಪತ್ತಬರಲು ಮಾಣಿಸುವನ್ನಾತಾಪಸಿಗಳಿಗೆ ಕಾಣಿಸುವನ್ನಾದಶರೂಪವ ಧರಿಸಿ ಜನಿಸುವನಾ 2

ರಜತಪೀಠ ಪುರವಾಸನ್ನಮಹರಜನೀಚರರ ವಿನಾಶನ್ನತ್ರಿಜಗದೊಳಗೆ ಪ್ರಕಾಶನ್ನನಮ್ಮವಿಜಯವಿಠ್ಠಲ ಮಾನಿಸನ್ನ 3
*********