Showing posts with label ತರಣಿ ನಂದನ ಶನೈಶ್ಚರ ನಿನ್ನ ಪಾದಾಬ್ಜಕೆರಗಿ ಬಿನೈಪೆ jagannatha vittala. Show all posts
Showing posts with label ತರಣಿ ನಂದನ ಶನೈಶ್ಚರ ನಿನ್ನ ಪಾದಾಬ್ಜಕೆರಗಿ ಬಿನೈಪೆ jagannatha vittala. Show all posts

Thursday, 20 May 2021

ತರಣಿ ನಂದನ ಶನೈಶ್ಚರ ನಿನ್ನ ಪಾದಾಬ್ಜಕೆರಗಿ ಬಿನೈಪೆ ankita jagannatha vittala

ಶ್ರೀ ಶನೈಶ್ಚರ ಸ್ತುತಿ

ತರಣಿ ನಂದನ ಶನೈಶ್ಚರ ನಿನ್ನ ಪಾದಾಬ್ಜಕೆರಗಿ ಬಿನೈಪೆ ಬಹುಜನ್ಮ

ಬಹು ಜನ್ಮ ಕೃತ ಪಾಪ ಪರಿಹಾರ ಮಾಡಿ ಸುಖವೀಯೋ


ಛಾಯಾ ತನುಜ ಮನಃ ಕಾಯ ಕ್ಲೇಶಗಳಿಂದ  ಆಯಾಸ ಪಡುವಂಥ ಸಮಯದಲಿ

ಸಮಯದಲಿ ಲಕ್ಷ್ಮೀನಾರಾಯಣನ ಸ್ಮರಣೆ ಕರುಣಿಸೋ


ಇದನೆ ಬೇಡುವೆ ಪದೋಪದಿ ಪುಷ್ಕರನ ಗುರುವೆ ಹೃದಯ ವದನದಲಿ ಹರಿಮೂತಿ೯

ಹರಿಮೂತಿ೯ ಕೀತ೯ನೆಗಳೊದಗಲೆನಗೆಂದು ಬಿನೈಪೆ


ಅಹಿಕ ಪಾರತ್ರಿಕದಿ ನೃಹರಿ ದಾಸರ ನವಗ್ರಹ ದೇವತೆಗಳು ದಣಿಸೋರೇ

ದಣಿಸೋರೆ ಇವರನ್ನು ಅಹಿತ ರೆಂದೆನುತ ಕೆಡಬೇಡಿ


 ಜಗನ್ನಾಥ ವಿಠ್ಠಲನ ಬದಿಗರಿವರಹುದೆಂದು ಹಗಲಿರುಳು ಬಿಡದೆ ನುತಿಸುವ

ನುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೂರು

***