ಪುರಂದರದಾಸರು
ಯದುನಂದನನ ನೋಡುವ ಬಾರೆ ಲತಾಂಗಿ |ಹದಿನಾಲ್ಕು ಜಗವನ್ನು ಪೊರೆವ - ನೀಲಘನಾಂಗನ ಪ
ಬಿಗಿದುಟ್ಟ ಕನಕಾಂಬರ - ಕಾಂಚಿಯದಾಮ|ನಗೆಯರಳ ಧರಿಸಿದವನ |ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ1
ಸಣ್ಣ ಪೊಂಗಳಲೂದುತ - ವನ್ಯದಳಾಕ್ಷ |ಕಣ್ಣ ಸನ್ನೆಯ ಮಾಡುತ ||ಚಿಣ್ಣರ ಒಡಗೂಡಿ ಚಿಗಿದುಬಾಹಕೃಷ್ಣನ2
ಮಂದಹಾಸ ಮುಖಾಂಬುಜ - ಪೊಂದಿದಂಥ |ಗಂಧ-ಕಸ್ತೂರಿ ತಿಲಕಾ |ಬಂದ ನಮ್ಮ ಪುರಂದರವಿಠಲ ಇಂದಿರೆಯರಸನ 3
*********