ಇಷ್ಟದ ರತುನವಿದು ಇಷ್ಟಪಟ್ಟು ಸತ್ಯಪ್ರಮೊದರು
ಕೊಟ್ಟ ರತುನವಿದು ||ಪಲ್ಲ||
ಕೊಳ್ಳುತೀನಂದರ ಹಣಕ ಸಿಕ್ಕುವದಿಲ್ಲ
ಒಳ್ಳೆ ಮನದಿ ಹರಿಯ ಪೂಜಿಸಲು ಬೇಕಿದು ll೧ll
ಭೋಗ್ಯ ಭಾಗ್ಯ ಸಂಪತ್ತಿಗಧೀನವಲ್ಲ
ಯೋಗ್ಯಧೀನವಾದ ಅತ್ಯಧಿಕ ರತನವಿದು ll೨ll
ಇರಲೆಪ್ಪ ಜತನ ಇದು ನಮ್ಮ ವತನ
ಗುರು ಕೊಟ್ಟ ರತುನ ಮಾಡಿರಿ ಧ್ಯಾನ ll೩ll
ಶಮನಗೊಳ್ಳಲಿ ಗುರುವಿನ ವ್ಯಸನ
ಗಮನಿಸುವ ಪರಮಾತ್ಮನಮ್ಮ ದುಮ್ಮಾನ ll೪ll
ಪರಕೆ ಪರತರವಾದ ಸ್ವರೂಪವಿಠಲನ
ಕರುಣೆಯು ದೊರೆಯಲಿ ಕಂಟಕ ಕಳೆಯಲಿ ll೫ll
***