Saturday, 16 October 2021

ಇಷ್ಟದ ರತುನವಿದು ಇಷ್ಟಪಟ್ಟು ಸತ್ಯಪ್ರಮೊದರು ankita swaroopa vittala satyapramoda teertha stutih

 ಇಷ್ಟದ ರತುನವಿದು ಇಷ್ಟಪಟ್ಟು ಸತ್ಯಪ್ರಮೊದರು

ಕೊಟ್ಟ ರತುನವಿದು ||ಪಲ್ಲ||


ಕೊಳ್ಳುತೀನಂದರ ಹಣಕ ಸಿಕ್ಕುವದಿಲ್ಲ

ಒಳ್ಳೆ ಮನದಿ ಹರಿಯ ಪೂಜಿಸಲು ಬೇಕಿದು ll೧ll


ಭೋಗ್ಯ ಭಾಗ್ಯ ಸಂಪತ್ತಿಗಧೀನವಲ್ಲ 

ಯೋಗ್ಯಧೀನವಾದ ಅತ್ಯಧಿಕ ರತನವಿದು ll೨ll


ಇರಲೆಪ್ಪ ಜತನ ಇದು ನಮ್ಮ ವತನ 

ಗುರು ಕೊಟ್ಟ ರತುನ ಮಾಡಿರಿ ಧ್ಯಾನ ll೩ll


 ಶಮನಗೊಳ್ಳಲಿ ಗುರುವಿನ ವ್ಯಸನ

 ಗಮನಿಸುವ ಪರಮಾತ್ಮನಮ್ಮ ದುಮ್ಮಾನ ll೪ll


ಪರಕೆ ಪರತರವಾದ ಸ್ವರೂಪವಿಠಲನ

ಕರುಣೆಯು ದೊರೆಯಲಿ ಕಂಟಕ ಕಳೆಯಲಿ ll೫ll

***


No comments:

Post a Comment