..
ರಂಗವೊಲಿದ ದಾಸರಾಯ | ಸತ್ಕವಿಜನಗೇಯ ಪ
ಮಂಗಳಕರ ಕುಲಿಶಾಂಗ ಮತಾಂಬುಧಿ
ತಿಂಗಳ ಮಾನವ ಸಿಂಗಾರ್ಯರ ಸುತ ಅ.ಪ
ಶರಣು ಮಂದಾರ ಪರಮೋದಾರ ಪರಿಪಾಲಿಸು ಧೀರ
ಸರಸಿಜ ತುಳಸಿ ಮಣಿ ಸುಹಾರ ಶೋಭಿತ ಕಂಧರ
ಶಿರಿವರ ಹರಿಕಥಾ ಮೃತ ಸಾರ ಸು
ರಸಗ್ರಂಥ ಕೃತ ಕರುಣಾನಿಧೆ ಗುರು 1
ಜ್ಞಾನಿಕುಲನಾಥ ಭಾನುಜಸೂತ ಭವವಾರಿಧಿ ಪೋತ
ಕ್ಷೋಣಿ ಸುರವ್ರಾತ ನಮಿತ ಸುಖ್ಯಾತ ವರದಾನಿ
ಪುನೀತ | ಧೇನುಪಾಲ ದಾಸಾರ್ಯರ ಪದಯುಗ
ಧ್ಯಾನಿತ ಮಾನಿತ ಮಾನವಿ ನಿಲಯ 2
ಕಾಮಿತದಾತ ದುರಿತ ವಿದೂರ ಸನ್ಮಹಿಮಾಪಾರ
ಪಾಮರ ಹೇಮಶಯ್ಯ ಕುಮಾರ ಕುಮತಾಬ್ಧಿ ಸಮೀರ
ಕೋಮಲಾಂಗ ಮಮಸ್ವಾಮಿ ಸೋಮನುತ
ಶಾಮಸುಂದರ ಸುಧಾಮ ಪ್ರೇಮ ಸಖ 3
***