ವಸುದೇವ ಸುತನ ಶಶಿ ಮುಖವನುತಂದು ತೋರಿಸೆ ಸಖಿ ತಂದು ತೋರಿಸೆ ಪ
ಹೊಸಬೆಣ್ಣೆ ಬುತ್ತಿಯ ಪಶುಪಾಲಗಿತ್ತುಪೊಗಳುವೆ ಕೇಳವನ ಚರಿತೆಯ ಅ.ಪ.
ಫುಲ್ಲಾಕ್ಷಿ ಇಟ್ಟ ಮನವನು ಅವನಲ್ಲಿ ತೆಗಿಯೆನೆ ಗೋ-ವಲ್ಲಭ ಬೆನ್ನು ಬಾಗಿ ಮೋಹಿಸುತ ಪೋದನೆ 1
ಸಖಿಕೇಳು ಮತಿಯು ಭ್ರಮಿಸಿತು ಅವನಲ್ಲಿ ಅತಿಶಯಸುಖದಿಂದ ಸ್ಮರಿಸುವೆ ಕೇಳವನ ಚರಿತೆಯ 2
ಇದು ನೋಡೆ ಎನ್ನ ಹಿಂದಿನ ಸುಕೃತ ಇದ್ದರೀತ ನಾ ಸಖೀತಂದು ತೋರೆ ನೋಡುವೆನಾ ಇಂದಿರೇಶನಾ 3
****