Showing posts with label ಆಯುವೃದ್ಧಿಯಾಗೋದು ಶ್ರೇಯಸ್ಸು vijaya vittala suladi ಧನ್ವಂತರಿ ಸುಳಾದಿ AYURVRUDDHIYAGODU SHREYASSU suladi DHANVANTRI SULADI. Show all posts
Showing posts with label ಆಯುವೃದ್ಧಿಯಾಗೋದು ಶ್ರೇಯಸ್ಸು vijaya vittala suladi ಧನ್ವಂತರಿ ಸುಳಾದಿ AYURVRUDDHIYAGODU SHREYASSU suladi DHANVANTRI SULADI. Show all posts

Sunday 8 December 2019

ಆಯುವೃದ್ಧಿಯಾಗೋದು ಶ್ರೇಯಸ್ಸು vijaya vittala suladi ಧನ್ವಂತರಿ ಸುಳಾದಿ AYURVRUDDHIYAGODU SHREYASSU suladi DHANVANTRI SULADI

Vijaya daasa kruta ಶ್ರೀಧನ್ವಂತರಿ ಸುಳಾದಿ ಶ್ರೀ ವಿಜಯದಾಸರು ಕೃತ


1st Audio by Mrs. Nandini Sripad

just scroll down for other devaranama and suladi 

ಶ್ರೀ ವಿಜಯದಾಸರು ಕೃತ Dhanvantari SuLaadi ಶ್ರೀಧನ್ವಂತರಿ ಸುಳಾದಿ 

 ರಾಗ ನಾದನಾಮಕ್ರಿಯಾ 

 ಧ್ರುವತಾಳ 

ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವದು
ಕಾಯ ನಿರ್ಮಲಿನ ಕಾರಣವಾಹುದು
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿಮೊದಲಾದ ಕುತ್ಸಿತದೇಹ ನೀ -
ಕಾಯವ ತೆತ್ತಿ ದುಷ್ಕರ್ಮದಿಂದ
ಕ್ರೀಯಾಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕ ಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪಾ
ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ -
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯವಿಠ್ಠಲ ರೇಯಾ
ಪ್ರೀಯನು ಕಾಣೊ ನಮಗೆ ಅನಾದಿರೋಗ ಕಳೆವಾ ॥ 1 ॥

 ಮಟ್ಟತಾಳ 

ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ
ಮನ್ನುಜ ಭೂವನದೊಳು ಧನ್ಯನು ಧನ್ಯನೆನ್ನಿ
ಚನ್ನ ಮೂರ್ತಿ ಸುಪ್ರಸನ್ನ ವಿಜಯವಿಠ್ಠಲನ 
ಸತ್ಯವೆಂದು ಬಣ್ಣಿಸು ಬಹು ವಿಧದಿ ॥ 2 ॥

 ತ್ರಿವಿಡಿತಾಳ 

ಶಶಿಕುಲೋದ್ಭವ ಧೀರ್ಘತಮ ನಂದನ ದೇವಾ
ಶಶಿವರ್ನಾ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೊದೆ ತಾಪ 
ಓಡಿಸುವೌಷಧ ತುಲಸಿಜನಕ 
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೋ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ ॥ 3 ॥

 ಅಟ್ಟತಾಳ 

ಶರಣು ಶರಣು ಧನ್ವಂತ್ರಿ ತಮೋಗುಣ ನಾಶಾ
ಶರಣು ಆರ್ತಜನ ಪರಿಪಾಲಕ ದೇವ 
ತರುವೆ ಭವ ತಾಪ ಹರಣ ದಿತಿಸುತ
ಹರಣ ಮೋಹಕ ಲೀಲಾ ಪರಮಪೂರ್ಣ ಬ್ರಹ್ಮ
ಉದ್ಧಾರಕ ಉರುಪರಾಕ್ರಮ ಉರಗಶಾಯಿ 
ವರ ಕಿರೀಟ ಮಹಾಮಣಿ ಕುಂಡಲ ಕರ್ಣ
ಮಿರುಗುವ ಹಸ್ತಕಂಕಣ ಹಾರಪದಕ ತಾಂ
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯವಿಠ್ಠಲರೇಯಾ 
ತರುಣಗಾತುರ ಜ್ಞಾನಮುದ್ರಾಂಕಿತ ಹಸ್ತಾ ॥ 4 ॥

 ಆದಿತಾಳ 

ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ 
ಬೀಳುವಾಗಲಿ ನಿಂತು ಕುಳ್ಳಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ - 
ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ
ಖೇಳವಾಗಿ ಮನುಜ ಮಾರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತ್ರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವೇಳ್ಯ ವೇಳ್ಯೆಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯವಿಠ್ಠಲರೇಯಾ 
ವಾಲಗ ಕೊಡುವನು ಮುಕ್ತರ ಸಂಗದಲಿ ॥ 5 ॥

 ಜತೆ 

ಧಂ ಧನ್ವಂತ್ರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲ ಒಲಿವಾ ॥
***********



ರಾಗ – ಭೈರವಿ    ತಾಳ – ಧ್ರುವ

ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು

ಕಾಯಾ ನಿರ್ಮಲಿನಾ ಕಾರಣವಾಹದೋ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕಕರ್ತ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ-
ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ
ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || 1 ||

ತಾಳ – ಮಟ್ಟ


ಧನ್ವಂತ್ರಿ ಶ್ರೀಧನ್ವಂತ್ರಿ ಎಂದು

ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನೂಜ ಭುವನದೊಳು ಧನ್ಯನು ಧನ್ಯನೆನ್ನಿ
ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠ-
ಲನ್ನಸತ್ಯವೆಂದು ಬಣ್ಣಿಸು ಬಹು ವಿಧದಿ || 2 ||

ತಾಳ – ತ್ರಿವಿಡಿ


ಶಶಿಕುಲೋದ್ಭವ ದೀರ್ಘತಮ ನಂದನ ದೇವಾ

ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ-
ಡಿಸುವೌಷಧಿ ತುಲಸಿ ಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ || 3 ||

ತಾಳ – ಆಟ


ಶರಣು ಶರಣು ಧನ್ವಂತರಿ ತಮೋಗುಣ ನಾಶಾ

ಶರಣು ಆರ್ತಜನ ಪರಿಪಾಲಕ ದೇವಾ
ತರುವೆ ಭವ ತಾಪ ತರುಣ ದಿತಿಸುತ
ಹರಣ ಮೋಹಕ ಲೀಲಾ ಪರಮ
ಪೂರ್ಣ ಬ್ರಹ್ಮಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲಕರ್ಣ
ಮಿರುಗುವ ಹಸ್ತ ಕಂಕಣ ಹಾರಪದಕ ತಾಂ-
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯ ವಿಟ್ಠಲರೇಯಾ
ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || 4 ||

ತಾಳ – ಆದಿ

ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ

ಬೀಳುವಾಗಲಿ ನಿಂತು ಕುಳಿತಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ-
ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ
ಖೇಳವಾಗಿ ಮನುಜ ಮರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವ್ಯಾಳಿ ವ್ಯಾಳಿಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ || 5 ||

ಜತೆ

ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲವೊಲಿವಾ || 6 ||
******
 ಲಘುಟಿಪ್ಪಣಿ : 

 ಧ್ರುವತಾಳ : 

 ಕಾಯನಿರ್ಮಲಿನ = ಶರೀರದ ಶುದ್ಧಿಗೆ ;
 ನಿಕಾಯ = ಗುಂಪು ;
 ಓಷಧಿನಿಯಾಮಕ = ಸ ಜ್ಯಾಯಾನ್ ಸರ್ವಭೂತೇಭ್ಯಸ್ತಸ್ಮಾತ್ಸರ್ವೌಷಧಂ ಸ್ಮೃತಃ । ಸಂಸಾರೇ ದಹ್ಯಮಾನಾನಾಮಾಶ್ರಯತ್ವಾತ್ಸ ಔಷಧಮ್ ॥ 
ಶ್ರೀಹರಿಯು ಸರ್ವಭೂತಗಳಲ್ಲಿಯೂ ಶ್ರೇಷ್ಠನಾದುದರಿಂದ " ಸರ್ವೌಷಧ "ನೆಂದು ಪ್ರಸಿದ್ಧನಾಗಿದ್ದಾನೆ. ಸಂಸಾರತಾಪದಿಂದ ಸುಟ್ಟು ಬಳಲುವವರಿಗೆ ಅತ್ಯಂತ ಆಶ್ರಯನಾದುದರಿಂದಲೂ ಆತನು " ಔಷಧ " ರೂಪನಾಗಿದ್ದಾನೆ. (ತೈತ್ತರೀಯಭಾಷ್ಯ)
 ರಾಜೌಷಧಿನಿಯಾಮಕ = ಚಂದ್ರನ ಅಂತರ್ಯಾಮಿಯಾಗಿದ್ದು , ಔಷಧಿಗಳಿಗೆ ನಿಯಾಮಕ ;
 ಮಾಯಾಮಂತ್ರದಿಂದ = ಆಭಿಚಾರಿಕ ಕೃತ್ಯಗಳಿಂದ ;
 ಸನ್ಯಾಯವಂತನಾಗಿ = ಸುಜನರಿಗೆ ಬಾಧೆಯಾಗದಂತೆ ; 

 ತ್ರಿವಿಡಿತಾಳ : 

 ಕಲಶ ಕಲಶಪಾಣಿ = ನೀರು ಬಡಿಸುವ ಒಂದು ಕಲಶ . ಇನ್ನೊಂದು ಅಮೃತಪೂರಿತ ಕಲಶ ಉಳ್ಳವ ;
 ಅಶ್ವಿನೇಯ = ಅಶ್ವಿನೀದೇವತೆಗಳು ;
 ಭಿಷ್ಕ = ಭಿಷಕ್ = ವೈದ್ಯ ;
 ಅಸು ಇಂದ್ರಿಯಗಳ = ಪ್ರಾಣೇಂದ್ರಿಯಗಳ; 

 ಅಟ್ಟತಾಳ : 

 ಬ್ರಹ್ಮಉದ್ಧಾರಕ = ಬ್ರಹ್ಮ - ವೇದ ಅಂದರೆ ಆಯುರ್ವೇದ(ಉಪವೇದ) ಅಂತ ಅಭಿಪ್ರಾಯ ; ವೇದಸ್ತತ್ವಂ ತಪೋ ಬ್ರಹ್ಮ - ಅಮರಕೋಶ. 

 ಆದಿತಾಳ : 

 ಖೇಳ = ಮಾತುಕಥೆ - ವಿನೋದಗೋಷ್ಠಿ ;
 ವಾಲಗ = ಸೇವೆ ;
 ಬಾಳುವಾಗಲಿ = 
(1) ಹರಕೆಯನ್ನು ಹೊತ್ತು ಅದನ್ನು ಪೂರೈಸಲೋಸುಗ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ಹೋಗುವಾಗ ಸತ್ಪಾತ್ರರಿಗೆ ಕೊಡುವ ಭೋಜನಕ್ಕೆ ' ಬಾಳು ' ಎಂದು ಹೆಸರು.
(2) ಸಾರ್ಥಕವಾದ ದೀರ್ಘಾಯುಷ್ಯವುಳ್ಳವನಾಗಿ ' ಬಾಳು ' ಎಂದು ಆಶೀರ್ವಾದ ಮಾಡುವಾಗ ; 

 ವಿವರಣೆ : 
 ಹರಿದಾಸರತ್ನಂ ಶ್ರೀಗೋಪಾಲದಾಸರು
*******

************
ಧನ್ವಂತರಿ ಸುಳಾದಿ

ರಚನೆ - ವಿಜಯದಾಸರು

ಧ್ರುವ ತಾಳ
/-b/>

ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು
ಕಾರ್ಯನಿರ್ಮಲಿನ ಕಾರಣವಾಗುವುದು.
ಮಾಯಾ ಹಿಂದಾಗುವುದು ನಾನಾ ರೋಗದ ಬೀಜ
ಬೇಯಿಸಿ ಕಳೆವುದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾಯಿತು ದುಷ್ಕರ್ಮದಿಂದ
ಕ್ರಿಯಾಮಾಣಸಂಚಿತ ಭರಿತವಾಗಿದ್ದ ದುಃಖ
ಹೇಯಸಾಗರದೊಳು ಬಿದ್ದು ಬಳಲಿ,
ನೋಯಿಸಿಕೊಂಡು, ನೆಲೆಗಾಣದೆ, ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಧನ್ವಂತರಿ
ರಾಯರಾ ಔಷಧಿ ನಿಯಮಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪ-
ನಯ್ಯ, ದೇವಾದಿಗಳಿಗೆ ಧರ್ಮಜ್ಞಗುಣ ಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ.
ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ನ್ಯಾಯವಂತನಾಗಿ ಚೇಷ್ಟೆ ಮಾಳ್ಪ-
ವಾಯುವಂದಿತ ನಿತ್ಯ ವಿಜಯವಿಠಲರೇಯ
ಪ್ರೀಯನು ಕಾಣೋ ನಮಗೆ ಅನಾದಿರೋಗ ಕಳೆವ ||೧||

ಮಟ್ಟ ತಾಳ/-b/>

ಧನ್ವಂತರಿ ಶ್ರೀ ಧನ್ವಂತರಿ ಎಂದು
ಸನ್ನುತಿಸಿ ಸತತಾವಿಚ್ಚಿನ್ನ ಜ್ಞಾನದಿಂದ
ನಿನ್ನವ ನಿನ್ನವನೆಂದು ಘನತೆಯಲಿ ನೆನೆವ
ಮನುಜ ಭುವನದೊಳು ಧನ್ಯನು ಧನ್ಯನೆನ್ನಿ
ಘನ್ನ ಮೂರುತಿ ಒಲಿವ ವಿಜಯವಿಠಲ ಸುಪ್ರ
ಸನ್ನ ಸತ್ಯನೆಂದು ಬಣ್ಣಿಸು ಬಹುವಿಧದಿ ||೨||

ತ್ರಿಪುಟ ತಾಳ /-b/>

ಶಶಿಕುಲೋದ್ಭವ ದೀರ್ಘಾತಮ ನಂದನ ದೇವ,
ಶಶಿವರ್ಣಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯವಂದ್ಯ
ಶಶಿಗರ್ಭ ಭೂರುಹ ಲತೆ ತಾಪ ಓಡಿಸುವ
ಔಷಧಿ ತುಳಸಿಜನಕ ವಾಸುದೇವ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದೆ ಮಹೋದಧಿ ಮಥಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷಘಟ ಧರಿಸಿ.
ಅಸಮದೈವವೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವುದು
ದಶದಿಶದಲಿ ಮೆರೆವ ವಿಜಯವಿಠಲ ಭಿಷಕು
ಅಸು ಇಂದ್ರಿಯಂಗಳ ರೋಗನಿವಾರಣ ||೩||

ಅಟ್ಟತಾಳ /-b/>

ಶರಣು ಶರಣು ಧನ್ವಂತರಿ ತಮೋಗುಣನಾಶ,
ಶರಣು ಆರ್ತಜನಪರಿಪಾಲಕ, ದೇವ
ತರುವೇ, ಭವತಾಪಹರಣ, ದಿತಿಸುತ
ಹರಣ ಮೋಹಕಲೀಲಾ ಪರಮ
ಪೂರಣ ಬ್ರಹ್ಮ, ಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರುಕ್ರಮ ಉರಗಶಾಯಿ
ವರಕಿರೀಟ, ಮಹಾಮಣಿ ಕುಂಡಲಕರ್ಣ,
ಮಿರುಗುವ ಹಸ್ತಕಂಕಣ, ಹಾರಪದಕ,
ವರಗಾಂಚಿಪೀತಾಂಬರ, ಚರಣಭೂಷಾ,
ಸಿರಿವತ್ಸಲಾಂಛನ ವಿಜಯವಿಟಲರೇಯ
ತರಣಿಗಾತರ, ಜ್ಞಾನಮುದ್ರಾಂಕಿತಹಸ್ತ ||೪||

ಆದಿತಾಳ/-b/>

ಏಳುವಾಗಲಿ, ಮತ್ತೆ ತಿರುಗುವಾಗಲಿ,
ಬೀಳುವಾಗಲಿ ನಿಂದು ಕುಳ್ಳಿರುವಾಗಲಿ
ಹೇಳುವಾಗಲಿ, ಪೋಗಿ ಸತ್ಕರ್ಮ ಮಾಡುವಾಗಲಿ,
ಬಾಳುವಾಗಲಿ, ಭೋಜನ ನಾನಾ ಷಡ್ರಸ ಸ
ಮ್ಮೇಳವಾಗಲಿ, ಮತ್ತೆ ಪುತ್ರಾದಿಗಳೊಡನೆ
ಖೇಳವಾಗಲಿ ಮನುಜ ಮರೆಯದೆ ಒಮ್ಮೆ ತನ್ನ
ನಾಲಗೆ ಕೊನೆಯಲ್ಲಿ ಧನ್ವಂತರಿ ಎಂದು
ಕಾಲ ಅಕಾಲದಲ್ಲಿ ಸ್ಮರಿಸದರೆ ಅವಗೆ
ವ್ಯಾಳೆವ್ಯಾಳೆಗೆ ಬಾಹೋ ಭವಬೀಜ ಪರಿಹಾರ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ ||೫||

ಜೊತೆ/-b/>

ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ಸಿರಿ ವಿಜಯವಿಠಲ ಒಲಿವ ||

*****

just scroll down for other devaranama and suladi