..
ಪತಿತ ಪಾವನರಂಗ ಸತತ ಕಾಯೊ
ಗತಿಯಾರು ನಿನ್ನುಳಿದು ಶ್ರುತಿವಿನುತ ಗೋಪಾಲ ಪ
ಆದಿಮೂಲನು ನೀನು ಆದಿರಹಿತನೆ ಸ್ವಾಮಿ
ಸಾಧ್ಯ ಸಾಧಕ ಸೇವ್ಯ ಸೇವಕನ ಕೃಷ್ಣ
ಭಾದ್ಯ ಭಾಧಕ ರಮಾರಾಧ್ಯ ಚಿತ್ಸುಖ ಸುಖ ಸಿಂಧು
ಕಾದುಕೋ ನಿನ್ನವನ ಆದಿರೋಗವÀ ಕಳೆದೂ 1
ನಾರಿ ದ್ರೌಪದಿ ಮಾನ ಕಾಯ್ದ ವಿಖ್ಯಾತನೆ ಶೌರಿ
ಕ್ರೂರ ನಕ್ರನ ಕೊಂದು ಕರಿಯ ಪೊರೆದೆ
ಹಾರಿ ಹಾವಿನ ಹೆಡೆಯ ಮೆಟ್ಟಿ ನರ್ತನಗೈದೆ
ಕ್ರೂರ ಫಣಿಯನು ಪೊರೆದ ಅಕ್ರೂರ ಸನ್ನುತ ಪಾಹಿ 2
ಪೋತಧ್ರುವ ಪ್ರಹ್ಲಾದ ಪುಂಡರೀಕರ ಪಾಲ
ಖ್ಯಾತ ಅಜಮಿಳನ ವಿಜಯಸೂತ
ಭೀತಿ ರಹಿತನ ಮಾಡು ಮಾಶತರೀಶ್ವನ ದೇವ
ದಾತ ಜಯೇಶವಿಠಲ ನೀ ಅಭಯ ಪಾಲಿಸೊ ದೊರೆಯೆ 3
***