Lyrics- Shri Vijaya Dasaru
Composition and sung by- Krishna dabair
sangraha: gorebala hanumantaraya
ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ
ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1
ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2
ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
***
pallavi
parama yOgiya nODirO nIvellaru parama yOgiya nODirO parama yOgiya nODi prItivantarAgi nireyava kaLedu bEDuvarella
caraNam 1
vAnara vESanAgi parvata sEridA bhAnu nandana manObhayakeya sallisi
Enenmbe balu ondu rUpavAgi dOri tAne tannoLageddu duruLara mOhisida
caraNam 2
viSayavanuNDu mUru lOkadoLage meredu asura bakana sILi dharige bisuTi
shashimukhiyaLa prIti baDisi arjunagolidu shashikuladali puTTi durjana santApa baDisi
caraNam 3
yatiyAgi janisi suvAkeva bhayasi matihIna janara shAstrava khaNDisi
tutisida bhaktarge gatiye koDuva prANapati vijayaviThala badari nilaya nitya parama
***