..
ನರಸಿಂಹ ದೇವರು
ರಕ್ಷಿಸೆನ್ನನು ನಿರುತ ನರಮೃತನಾಥ ಪ
ರಕ್ಷಿಸೆನ್ನ ಜಗತ್ಕುಕ್ಷಿಯೆ ಕರುಣಾಕ
ಟಾಕ್ಷದಿಂದೀಕ್ಷಿಸಿ ತ್ರ್ಯಕ್ಷಾಂತರ್ಗತದೇವ ಅ.ಪ
ಪತಿತಪಾವನ ಪರಶತ ಮೋದಗತ ಬೇದ
ಚತುರ್ವೇದ ಪಾಲ ಶತಕ್ರತು ಕೃತಿನಾಥ ||
ಯತಿ ತತಿ ಮಾನಸವೃತ ತೇಜ ಭಾಸ್ಕರ
ಸತತ ನಿನ್ನಯ ಪಾದವ | ಸದ್ಭಕುತಿಯಲಿ
ಸ್ತುತಿಪ ದಾಸರ ಸಂಗವ | ಗರೆದು ಭವ
ವ್ಯಥೆಯ ಬಿಡಿಸಿ | ಮಾಧವ ನೀನೊಲಿದತಿ
ಹಿತದಿಂದುಣಿಸು ನಿನ್ನ ಕಥೆ ಸುಧಾರಸವ 1
ಅರಿದರ ಗದಾಪದ್ಮಧರ ಚತುಷ್ಟಯಕರ
ಶರಚರಗಿರಿ ಧೃತ ಧರಣ ತಸ್ಕರ ಹರ
ನರಗಾತ್ರ ಹರಿವಕ್ರ ಸುರಪಾನುಜವಟು
ಪರಶುಪಾಣಿಯೆ ವಾನರ ನರಪಾಲಕವಿgಹಿÀ ತಾಂ
ಬರಕಲ್ಕಿ ಶರಣ ಜನರು ಭಕ್ತಿಪರವಶದಲಿ ಕೂಗಿ
ಕರೆಯಲಾಕ್ಷಣ ಓ ಎಂದು ಭರದಿ ಬಂದು
ಪೊರೆವ ಪ್ರಭು ನೀ ಎಂದು ಬುಧರು ಪೇಳ್ವ
ವರವಾಕ್ಯ ಮನಕೆ ತಂದು ಪ್ರಾರ್ಥಿಪೆ ನಿನ್ನ
ಚರಿತೆ ಪಾಡುವ ಸುಖಗರಿಯೊ ಬಂಧು 2
ಸಿಂಧುರ ವರದಾತ ಸಿಂಧು ಶಯನ ಶಾಮ
ಸುಂದರ ವಿಠಲ ಇಂದಿರಾತ್ಮಕ ತ್ರಯ
ಮಂದಿರ ಕಾರ್ಪರ ಮಂದಿರ ತರುರಾಜ
ಮಂದಿರ ದ್ವಿಜ ಮಧ್ಯ ಮಂದಿರಾತ್ಮಜ ಹೃ
ನ್ಮಂದಿರ ಸದ್ಧಕ್ತ ಮಂದಾರ ಭೂರುಹ3
***