..
ಪ್ರಾಣನಾಥನೇ ಬಹು ತ್ರಾಣತಪ್ಪಿದೆ ಎನ್ನ
ತ್ರಾಣವಾಗೊಟ್ಟು ಪೊರಿಯೋ ಪ
ಕ್ಷೋಣಿತಳದಿ ದುಗ್ಗಾಣಿ ಕಾಣದೀಪರಿ
ಕ್ಷೀಣನಾಗಿ ನಾ ಬಂದೆ ಮುಖ್ಯ ಪ್ರಾಣನಾಥನೆ ಅ.ಪ
ದೀನಜನಕೆ ಸುರಧೇನುವರನೆನಿಸಿ
ದೀನರ ಪೊರೆಯದಿರಲು
ಜ್ಞಾನಿಗಳಿದಕನುಮಾನ ಮಾಡದೆ ತಮ್ಮ
ಮಾನಸದಲಿ ನಿನ್ನಾ ಧ್ಯಾನಿಸುತಿಹರೈ 1
ವಾಣೀಪತಿಯೆ ಪಂಚಾನನಾದ್ಯಣುರೇಣು
ಕೊನೆಯಾಗಿಪ್ಪಾ ಜಗಕೆ
ಪ್ರಾಣ ಗುಣ ಧನ ತ್ರಾಣ ಮೊದಲಾದ
ಕ್ಷೀಣ ಸಂಪದವ ಕೊಡುವೆ ಮುಖ್ಯ 2
ದಾತಾ ನೆನಿಸಿದೆ ಧಾತಾನಾಂಡಕೆ ಭಾವಿ ವಿ -
ಧಾತಾ ನೀನಹುದೈ
ಧಾತಾ ಪ್ರಮುಖಸುರನಾಥಾ ಗುರು ಜಗ
ನ್ನಾಥಾ ವಿಠಲ ಪ್ರಿಯನೇ ಮುಖ್ಯ 3
***