Wednesday, 1 September 2021

ಪ್ರಾಣನಾಥನೇ ಬಹು ತ್ರಾಣತಪ್ಪಿದೆ ಎನ್ನ ತ್ರಾಣವಾಗೊಟ್ಟು ಪೊರಿಯೋ ankita gurujagannatha vittala

 ..

ಪ್ರಾಣನಾಥನೇ ಬಹು ತ್ರಾಣತಪ್ಪಿದೆ ಎನ್ನ

ತ್ರಾಣವಾಗೊಟ್ಟು ಪೊರಿಯೋ ಪ


ಕ್ಷೋಣಿತಳದಿ ದುಗ್ಗಾಣಿ ಕಾಣದೀಪರಿ

ಕ್ಷೀಣನಾಗಿ ನಾ ಬಂದೆ ಮುಖ್ಯ ಪ್ರಾಣನಾಥನೆ ಅ.ಪ


ದೀನಜನಕೆ ಸುರಧೇನುವರನೆನಿಸಿ

ದೀನರ ಪೊರೆಯದಿರಲು

ಜ್ಞಾನಿಗಳಿದಕನುಮಾನ ಮಾಡದೆ ತಮ್ಮ

ಮಾನಸದಲಿ ನಿನ್ನಾ ಧ್ಯಾನಿಸುತಿಹರೈ 1


ವಾಣೀಪತಿಯೆ ಪಂಚಾನನಾದ್ಯಣುರೇಣು

ಕೊನೆಯಾಗಿಪ್ಪಾ ಜಗಕೆ

ಪ್ರಾಣ ಗುಣ ಧನ ತ್ರಾಣ ಮೊದಲಾದ

ಕ್ಷೀಣ ಸಂಪದವ ಕೊಡುವೆ ಮುಖ್ಯ 2


ದಾತಾ ನೆನಿಸಿದೆ ಧಾತಾನಾಂಡಕೆ ಭಾವಿ ವಿ -

ಧಾತಾ ನೀನಹುದೈ

ಧಾತಾ ಪ್ರಮುಖಸುರನಾಥಾ ಗುರು ಜಗ

ನ್ನಾಥಾ ವಿಠಲ ಪ್ರಿಯನೇ ಮುಖ್ಯ 3

***


No comments:

Post a Comment