ಶಿವನೆ ನಾ ನಿನ್ನ ಕರೆಯುವೆ ಬಾರೊ ಪ
ಗಿರಿಜಾಮನೋಹರನೆ ಶಂಕರನೆ ಅ.ಪ.
ತರುಣಿಮಣಿಯು ವಾಮತೊಡೆಯಲೊಪ್ಪುವಳುತರಳರಿಬ್ಬರು ಬಲ ತೊಡೆಯಲೊಪ್ಪುವರುಸುರಸರಿತೆಯು ಜಟೋತ್ಪರಿ ಶೋಭಿಪಳುಗರಳಕಂಠದಿ ನೀಲ ಹರಳಿನಂತ್ಹೊಳೆವುದು 1
ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆಯ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತವ್ಯಾಳಚಲಾಂತಕ ಶ್ರೀಶೈಲದಿ ನಿಂತೆ 2
ಮಂದರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು ಮಂದಿರಕೋ ಇತಿ 3
****