Showing posts with label ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ vijaya vittala. Show all posts
Showing posts with label ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ vijaya vittala. Show all posts

Wednesday, 16 October 2019

ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ankita vijaya vittala

ಕರವ ಮುಗಿದು
ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಪ

ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ
ಬದರಮಂಗಳಗಾತ್ರ ಬಲು ಸುಲಭ
ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ
ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ 1

ಅಂದವಾದ ಕಾವ್ಯ ಸಾಮಥ್ರ್ಯಧೀರುವೆ
ಮಂದಹಾಸದಿ ನೋಳ್ಪ ಭಕುತ ಜನರ
ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು
ನಿತ್ಯ 2

ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ
ಸಾಧು ಸಜ್ಜನಗೇಯ ಸತ್ಯಬೋಧ
ಮೋದಿ ಹಯವದನ ರಾಮ ವಿಜಯವಿಠ್ಠಲ
ನಾದಿದೈವವೆಂದು ಎಣಿಸುವ ಜಪಶೀಲ 3
***********