Showing posts with label ವರಕವಿಗಳ ಮುಂದೆ ನರಕವಿಗಳು ವಿದ್ಯೆ neleyadikeshava. Show all posts
Showing posts with label ವರಕವಿಗಳ ಮುಂದೆ ನರಕವಿಗಳು ವಿದ್ಯೆ neleyadikeshava. Show all posts

Tuesday, 15 October 2019

ವರಕವಿಗಳ ಮುಂದೆ ನರಕವಿಗಳು ವಿದ್ಯೆ ankita neleyadikeshava

ರಾಗ ಸೌರಾಷ್ಟ್ರ , ಅಷ್ಟ ತಾಳ

ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು

ಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋರಬಾರದು , ಬಹು
ಕೋಪಿಗಳಿದ್ದಲ್ಲಿ ಅನುಭವ ಗೋಷ್ಠಿಯ ಮಾಡಬಾರದು

ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು , ಅತಿ
ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು

ಹರಿಯ ಜರೆದು ಹರ ಘನನೆಂದು ನರಕಕ್ಕೆ ಸೇರಬಾರದು, ತಾ
ಪರರನ್ನು ಬೈದು ಪಾತಕಕೆ ಮುನ್ನೊಳಗಾಗಬಾರದು

ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು, ಬಾ-
ಯ್ಬಡಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು

ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು , ಬಾಡ-
ದಾದಿಕೇಶವನ ಚರಣದ ಸ್ಮರಣೆಯ ಮರೆಯಬಾರದು
***

Varakavigaḷa munde narakavigaḷu vidye māḍabāradu, ī
dharaṇiya kallige śaraṇendu pūjeya māḍabāradu||

pāpigaḷiddallige rūpuḷḷa vastuva tōrabāradu, bahu
kōpigaḷiddalli anubhava gōṣṭhiya māḍabāradu||

aḍisatta maḍakege jōḍisi oleguṇḍa hūḍabāradu, ati
baḍatana bandāga neṇṭara bāgila sērabāradu||

hariya jaredu hara ghananendu narakakke sērabāradu, tā
pararannu baidu pātakake munnoḷagāgabāradu||

maḍadi nuḍiya kēḷi jagaḷakobbara kūḍe hōgabāradu, bā-
ybaḍakaru iddalli vasti biḍārava māḍabāradu||

munde bhalā endu hinde nindiparannu kūḍabāradu, bāḍa-
dādikēśavana caraṇada smaraṇeya mareyabāradu||
***