Showing posts with label ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್ mahadevapuravasa. Show all posts
Showing posts with label ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್ mahadevapuravasa. Show all posts

Thursday, 5 August 2021

ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್ ankita mahadevapuravasa

..

ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್

ಕರ್ಮತ್ಯಾಜ್ಯವ ಮಾಡಿರೊ ಪ


ಕರ್ಮತ್ಯಾಜ್ಯ ಮಾಡಿ ಧರ್ಮಮಾರ್ಗವ ನೋಡಿ

ನಿರ್ಮಲ ಮನಮೂಡಿ ಮರ್ಮಜ್ಯೋತಿಯ ಕೂಡಿ ಅ.ಪ


ಕಾಮಕ್ರೋಧಗಳ ಸುಟ್ಟು ಸಂಸೃತಿಯಳಿದು

ತಾಮಸಮತಿಯ ಬಿಟ್ಟು ಹೇಮದಾಸೆಗೆಮನ

ಪ್ರೇಮಮಾಡದೆ ಭಿನ್ನ ನಾಮರೂಪವ ನೂಂಕಿ

ರಾಮನೊಳ್ಮನ ನೆಟ್ಟು 1

ಪರಮಪಾವನಮಾದ ಶ್ರೀಹರಿಯಲ್ಲಿ

ಬೆರೆಯುತಾನಂದದಿಂದ

ಅರಿಗಳಾರರಸಂಗ ಕರಿಗಳೆಂಟರ ಭಂಗ

ಕಿರಿದುಎಂಟರ ಅಂಗ ಭರದಿ ತರಿದು ಈಗ 2

ಧರೆಯೊಳ್ದುಷ್ಟರ ಮರದು ಮಹನೀಯರ

ಚರಣಸೇವೆಯೊಳ್ಬೆರದು

ವರಮಹದೇವನಪುರದ ಶ್ರೀರಂಗನ

ನಿರುತ ನಂಬಿಯೆ ಸದ್ಗುರುವ ಸೇವಿಸಿ ದುಷ್ಟ 3

***