Showing posts with label ಹರಿಹರಿ ಗೋವಿಂದ ಯನಬಾರದೇ ಪ್ರಾಣಿ gurumahipati. Show all posts
Showing posts with label ಹರಿಹರಿ ಗೋವಿಂದ ಯನಬಾರದೇ ಪ್ರಾಣಿ gurumahipati. Show all posts

Wednesday, 1 September 2021

ಹರಿಹರಿ ಗೋವಿಂದ ಯನಬಾರದೇ ಪ್ರಾಣಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ಹರಿ ಗೋವಿಂದ ಯನಬಾರದೇ ಪ್ರಾಣಿ ಪ 

ಹರಿ ಹರಿ ಗೋವಿಂದಯನಲು ಭಕುತಿಯಲಿ | ಹರಿಸುವ ಪಾಪೌಘವನು ಸಾರಂಗ ಪಾಣೀ 1 

ವೃತ ತಪ ಸಾಧನದಿಂದಲೀ ನಿಲುಕದ ನಿಜಗತಿಯಾ| ಕ್ಷೀತಿಯೋಳು ಸುಲಭದಿ ಕೊಡುವನು ದೀನಾಭಿಮಾನಿ 2 

ತಂದೆ ಮಹಿಪತಿ ಕಂದಗ ಸಾರಿದ ಯಚ್ಚರ ನೀ | ಛಂದದಿ ಇಹಪರ ನೀವದು ಯದುರಾಜ ಸ್ಮರಣೀ 3

***