Showing posts with label ಇಂದ್ರಪ್ರಸ್ಥದಲ್ಲೆ ಕುಂತಿ ನಂದನ ರಾಜಸೂಯ್ಯಾಗವನು bheemesha krishna. Show all posts
Showing posts with label ಇಂದ್ರಪ್ರಸ್ಥದಲ್ಲೆ ಕುಂತಿ ನಂದನ ರಾಜಸೂಯ್ಯಾಗವನು bheemesha krishna. Show all posts

Tuesday 1 June 2021

ಇಂದ್ರಪ್ರಸ್ಥದಲ್ಲೆ ಕುಂತಿ ನಂದನ ರಾಜಸೂಯ್ಯಾಗವನು ankita bheemesha krishna

ಇಂದ್ರಪ್ರಸ್ಥದಲ್ಲೆ ಕುಂತಿ ನಂದ(ನ) ರಾಜಸೂಯ್ಯಾಗವನು ಆ-

ನಂದದಿ ಮಾಡಿಂದಿರೇಶಗರ್ಪಿಸಿದನು 1

ಮಂದಬುದ್ಧಿ ಕೌರವನು ಚೆಂದನೋಡಿ ಸೈರಿಸದೆ

ಪಾಂಡವರ ಪಟ್ಟಣದಿಂದ್ಹೊರಗ್ಹಾಕುವೆನೆಂದನು 2

ಘಾತಕ ದುರ್ಯೋಧನ ತನ್ನ ಮಾತುಳ ಶಕುನಿಯ ಕೇಳಿ

ಪ್ರೀತಿಂದೆ ಪಾಂಡವರ ಕರೆಸಿ ದ್ಯೂತವಾಡಿದ 3

ಆಗ್ರಾದಿಂದಾಟಗಳ ಸೋಲಿಸಿ ಶೀಘ್ರದಿಂದ್ವನವಾಸವ ಚರಿಸಿ

ಅಜÁ್ಞತ್ವಾಸೊಂದೊ(ದ್ವ?) ರುಷವೆಂದು ಪ್ರತಿಜÉ್ಞ ಮಾಡಿದ 4

ಸೋತು ಧರ್ಮ ಸಕಲೈಶ್ವರ್ಯ ಸಾದೇವ ನಕುಲ ಭೀಮರ

ಪಾರ್ಥ ದ್ರೌಪದಿಯ ಪಣಕಿಟ್ಟು ಕೂತನಾಗಲೆ 5

ಆನೆ ಕುದುರೆ ಅಷ್ಟೈಶ್ವರ್ಯ ಬ್ಯಾಗೆ ತನ್ನಿರಿ ಭಂಡಾರವನು

ಹೋಗಿ ದ್ರೌಪದಿ ಕರೆಯಿರೆಂದು ಹೇಳಿದನಾಗ 6

ಬಂದು ಭಟರು ದ್ರೌಪದಿಯ ಮುಂದೆ ಕರವ ಮುಗಿದು ನಿಂತು

ಇಂದು ನಮ್ಮ ರಾಜಸಭೆಗೆ ಬನ್ನಿರೆಂದರು 7

ತಾಯೆ ಕೇಳ್ ನಿಮ್ಮರಸುಗಳು ಮಾಯದಿಂದ್ವಂಚಿತರಾಗಿ

ದಾಯವಾಡಿ ಸೋತರಿನ್ನುಪಾಯವಿಲ್ಲೀಗೆ 8

ಇಂದಿರೇಶನ ದಯವು ನಮ್ಮಲ್ಲಿದ್ದ ಕಾರಣದಿಂದೀಗ

ಬಂದ ದುರಿತ ಬಯಲಾಗುವುದ್ಹ್ಯಾಗೆಂದು ನುಡಿದಳು 9

ಚಂದ್ರ ಜ್ಯೋತಿಯಂತೆ ಹೊಳೆವೊ ಮಂದಗಮನೆ (ಇ)ಂದು ವದನೆ

ದುಂಡು ಮಲ್ಲಿಗೆಶಿರವ ಬಾಗಿ ಬಂದು ನಿಂತಳು 10

ಕಂಡು ದುರ್ಯೋಧನ ದ್ರೌಪದಿ ನಿನ್ನ ಗಂಡರಡವಿಗೈದುವೋರು

ಹೆಂಡತ್ಯಾಗಿರೆನ್ನ ಬಳಿಗೆ ಬಾರೆ ಎಂದನು 11

ಕೆಂಡ ತುಂಬಿದ ಕೊಂಡದೊಳು ಕಂಡೂ ನೀ ಹಾರುವರೇನೊ

ತುಂಡು ಮಾಡಿ ಕಡಿವೋರೈವರು ಬ್ಯಾಡೋಯೆಂದಳು 12

ಪತಿಗಳಿಂದೆ ರಹಿತಳೆ ದ್ರೌಪದಿಯೆ ನೀನತಿ ಹರುಷದಿಂದೆ

ಸತಿಯಾಗಿ ಬಾಳ್ಹಿತದಿಂದೆನ್ನಕೂಡೇಯೆಂದನು 13

ಪತಿಯಿಂದೆ ರಹಿತಳು ಭಾನುಮತಿಯೋ ಧೃತರಾಷ್ಟ್ರ ಗಾಂಧಾರಿ

ಸುತಹೀನರಾಗುವರತಿ ಬ್ಯಾಗೆ ಮತಿಗೇಡಿ ಕೇಳೊ 14

ಅಷ್ಟಬಡವರವರ ಹಿಂದೆ ಕಷ್ಟಬಟ್ಟು ತಿರುಗೋರೇನೂ

ಪಟ್ಟೆ ಮಂಚಕ್ಕೊಪ್ಪುವ್ಯಂತೇ ಬಾರೇಯೆಂದನು 15

ಅಷ್ಟ ಬಡವರೈವರು ನಿನ ಶಿರ ಕುಟ್ಟಿ ಯಮಪಟ್ಟಣಕ್ಕೆ

ಅಟ್ಟಿ ರಾಜ್ಯಕ್ಕಧಿಕಾರ್ಯವರು ಕೇಳೋಯೆಂದಳು 16

ಅಚ್ಚ ಮುತ್ತಿನಂತೆ ಹೇಮ ಪುತ್ಥಳಿಗೊಂಬೆ ನಿನ್ನಲ್ಲಿ

ಇಚ್ಛ ಮಾಡಿದ್ದೇನೀಗೆನ್ನ ಕೂಡೆ ಎಂದನು 17

ಹುಚ್ಚು ಹಿಡಿದಿತೇನೋ ನಿನಗೆ ಉಚ್ಚು ಬಡಿದು ನಿನ್ನ ಹಲ್ಲು

ನುಚ್ಚು ಮಾಡಿ ಕೊಲ್ಲೋರೈವರು ಬ್ಯಾಡೋಯೆಂದಳು 18

ಬಡನಡುವಿನ ವೈಯಾರಿ ಕಡುಚೆಲ್ವೆ ದ್ರೌಪದಿಯೆ ಎನ್ನ

ತೊಡೆಯಮ್ಯಾಲೆ ಒಪ್ಪುವ್ಯಂತೆ ಬಾರೆಯೆಂದನು 19

ಕಡುಪಾಪಿ ನೀ ನುಡಿವೋ ನಾಲಿಗೆ ಕಡಿದು ಭೀಮನ ಗದೆಯು ನಿನ್ನ

ತೊಡೆ ಉರ ಭೇದಿಸುವೋದನು ನೋಡೇನೆಂದಳು 20

ಅಂಗನೆ ನಿನ್ನಂಗಸಂಗವಾಗದಿದ್ದರೆ ನಿನ್ನ ಮಾನ-

ಭಂಗ ಮಾಡಿ ಬತ್ತಲೆ ನಾ ನಿಲಿಸೇನೆಂದನು 21

ಪುಂಡ ಖಳ ನಿನ್ನುದರ ಓಕುಳಿಕೊಂಡಮಾಡೋಕುಳಿಯನಾಡಿ

ಚೆಂಡನಾಡಲು ನಿನ್ನ ಶಿರವ ನೋಡೇನೆಂದಳು 22

ಪಾಪಿ ದುಶ್ಶಾಸನನು ಬಂದು ದ್ರೌಪದಿಯ ಮುಂದೆ ನಿಂತು

ನೂತನದ ನಿರಿಯ ಪಿಡಿದು ಸೆಳೆಯುತಿದ್ದನು 23

ನಿಲ್ಲೊ ಪಾಪಿ ನಿನ್ನ ರಕ್ತ ಎರೆದು ಹಲ್‍ಹಣಿಗಿಯಲ್ಹಿಕ್ಕಿ

ಎಲ್ಲ ಕರುಳ್ವನಮಾಲೆಯ ಮಾಡಿ ಮುಡಿವೆನೆಂದಳು 24

ಮಂಗಳ ಮೂರುತಿ ಮಾರಜನಕ ಎನ್ನ ರಕ್ಷಿಸೆಂದು

ಕಂಗಳೆರಡ ಮಚ್ಚಿ ಕರವ ಮುಗಿದು ನಿಂತಳು 25

ಮಡುವಿನಲ್ಲೆ ಮುಚ್ಛನಾಗಿ ಬಿಡದೆ ವೇದವ ತಂದು ಕ್ಷೀರ-

ಕಡಲ ಕಡೆದ ಕೂರುಮ ಎನ್ನ ಕಾಯೋಯೆಂದಳು 26

ಕಡುಕ್ರೂರ ವರಾಹಾವತಾರ ಹಿಡಿದು ಹಿರಣ್ಯಾಕ್ಷನ ಕಂಬ

ವೊಡೆದು ಬಂದಾರ್ಭಟಿಸುವ ಸಿಂಹ ಕಾಯೊ ಎಂದಳು 27

ಬಡವನಾಗಿ ಬಲಿಯ ದಾನ ಬೇಡಿಕೊಂಡ್ವಾಮನನೆ ದೊಡ್ಡ

ಕೊಡಲಿ ಪಿಡಿದು ಕ್ಷತ್ರಿಯರನೆ ಕಡಿಬ್ಯಾಗೆಂದಳು 28

ಹತ್ತು ತಲೆಯ ರಾವಣನ ಹತವಮಾಡಿದ್ದವನೆ ಗೋಪೀ

ಪುತ್ರನಾದ ಕೃಷ್ಣ ಎನ್ನ ರಕ್ಷಿಸೆಂದಳು29

ಬತ್ತಲಿದ್ದ ಬೌದ್ಧ ನೀ ಬಿಟ್ಟೊ ್ವಸ್ತ್ರ ಎನಗುಡುಗೊರೆಯ ಕೊಟ್ಟು

ಹತ್ತಿ ತೇಜಿ ಹರುಷದಿಂದ ಬಾರೋಯೆಂದಳು 30

ಕ್ಷೀರಸಾಗರದಲ್ಲೆ ನೀ ಶ್ರೀಲಕ್ಷ್ಮೀ ಸಹಿತ ಇದ್ದರೇನು

ಭೂ ವೈಕುಂಠವಾಸಿ ಎನ್ನ ಕಾಯೋಯೆಂದಳು 31

ಅನಂತಾಸನದಲ್ಲೆ ಆದಿಲಕ್ಷ್ಮೀ ಸಹಿತಾಗಿದ್ದರೇನು

ಸೇತೂ(ಶ್ವೇತ?) ದ್ವೀಪವಾಸಿಯೆನ್ನ ಕಾಯೋಯೆಂದಳು 32

ಮಧುರಾ ವಾಸಿ ವೃಂದಾವನ ಗೋವ್ರಜದಲ್ಲಿದ್ದರೇನೊ ಕೃಷ್ಣ

ಒದಗಿಬಂದೀಗೆನ್ನಭಿಮಾನ ಕಾಯೋಯೆಂದಳು 33

ದ್ವಾರಕಿಯಲ್ಲೇ ಹದಿನಾರುಸಾವಿರ ಮಂದಿ ಸತಿಯರ

ಬ್ಯಾಗೆ ಬಿಟ್ಟೀಗೆನ್ನ ಬಳಿಗೆ ಬಾರೋಯೆಂದಳು 34

ನಿಂತು ಕರೆವೋ ದ್ರೌಪದಿ ತನ್ನ ಏಕಾಂತಭಕ್ತಳೆಂದು ಲಕ್ಷ್ಮೀ

ಕಾಂತ ಅಕ್ಷಯವೆಂದ ವಸ್ತ್ರಾನಂತವಾದುವು 35

ಕೆಂಪು ಹೂವು ಇರುವಂತಿಗೆಯು ಪಂಚಪೈಠಣಿ ಪಗಡಿ ಬಣ್ಣ

ಚಿಂತಾಕು ಪೈಠಣಿಯ ನಿರಿ ಸೆಳೆಯುತಿದ್ದನು 36

ಕರಿಯ ಹೂವು ಕಡ್ಡಿಪೈಠಣಿ ಸೆರಗು ಜರದ ಚಾರಖಾನಿ

ಪರಿಪರಿ ಪತ್ತಲಗಳ ತಾ ಸೆಳೆಯುತಿದ್ದನು 37

ಬಿಳಿಯ ಹೂವು ಬಟ್ಟ ಮುತ್ತಿನ ಹೊಳೆವೊ ನಿಂಬಾವಳಿಯು ಚಂದ್ರ

ಕಳೆಯ ಸೀರೆಗಳನೆ ಪಿಡಿದು ಸೆಳೆಯುತಿದ್ದನು 38

ಸೂರೂತಿ ಸುಗುತೀಯ ಬಣ್ಣ ಭಾರಿ ಬಾಳೆಪಟ್ಟೆಗಳನು

ದ್ವಾರ್ಯಾಮನಿ ಖಂಬಾವತಿ ಸೀರೆ ಸೆಳೆಯುತಿದ್ದನು 39

ತಬಕಾದ್ಹೂವೆಳ್ಳ್ಹೂವು ಗೆರೆ ಸಾಸಿವೆಯ ಚಿಕ್ಕಿ ಸರಪಳ್ಯಂಚು

last lines may be missing

****