Showing posts with label ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ uragadrivasa vittala. Show all posts
Showing posts with label ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ uragadrivasa vittala. Show all posts

Monday, 2 August 2021

ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ ankita uragadrivasa vittala

ಶರಣಾಗತರಕ್ಷಕ ಬೇಗದಿ ಬಂದು

ಮನಮಂದಿರದಿ ನಿಲ್ಲೋ ಪ

ಈ ಕರೆಕರೆ ಸಂಸಾರಶರಧಿಯೊಳು ನಿಂದೆ

ಹರಿಯೆ ನಿಲ್ಲೊಂದರಘಳಿಗೆಯಾದರೂ ಮನದಿ ಅ.ಪ


ತೋಯಜಾಂಬಕ ನಿನ್ನ ನಾನೆಂದಿಗೆ

ಕಾಯದೊಳು ಕಾಂಬೆನೊ

ಮಾಯಾರಮಣನೆ ನೀ ಮಾಯವ ಹರಿಸಯ್ಯ

ಆಯಾಸಗೊಳಿಸದೆ ಕಾಯುವುದೀಗಲೆ 1


ನಾನಾಯೋನಿಗಳಲ್ಲಿ ನಾ ಬರಲಂಜೆನೋ

ಶ್ವಾನಸೂಕರ ಜನ್ಮದಿ ನೀನಿಟ್ಟರಾದರು

ಶ್ರೀನಿಧಿಯೆ ನಿನ್ನಯ ಸ್ಮ-

ರಣೆ ಒಂದಿದ್ದರೆ ನಾ ಧನ್ಯ ಧನ್ಯನೋ2


ಲೋಕಾಲೋಕೋದ್ಧಾರನೆ ನಿನ್ನಾಜ್ಞೆಯಿಂ

ಏಕಾದಶೇಂದ್ರಿಯದಿ ನಾಕೇಶ ಮೊದಲಾದ ಪಿ-

ನಾಕಿ ಪ್ರಮುಖರು ಅನೇಕ ಕಾರ್ಯವೆಸಗಿ

ಶೋಕಪಡಿಸುವರಯ್ಯ 3


ದುರ್ಗಾಶ್ರೀರಮಣ ಎನ್ನ ಸಂಸೃತಿಯೆಲ್ಲ

ದುರ್ಗಮವಾಗಿಹುದೊ ಸ್ವರ್ಗ ಅಪ-

ವರ್ಗಪ್ರದನೆ ಎನ್ನಯ ಭವ-

ದುರ್ಗಕಡಿದು ಸನ್ಮಾರ್ಗ ಕರುಣಿಸೊ 4


ಸ್ವಾಮಿತೀರ್ಥದಿವಾಸ ಶ್ರೀಜಗದೀಶ

ಸ್ವಾಮಿ ಶ್ರೀ ವೆಂಕಟೇಶ ಪಾಮರನಾದೆನ್ನ

ತಾಮಸ ಹರಿಸಿ ಹೃತ್ಕಮಲದಲಿ ನಿಲ್ಲೊ

ಕಮಲಾಪತಿಯೆ ದೇವ 5

****