Showing posts with label ಜನ್ಮ ಸಫಲ ಕಾಣಿರೋ rajesha hayamukha JANMA SAPHALA KAANIRO VADIRAJA STUTIH. Show all posts
Showing posts with label ಜನ್ಮ ಸಫಲ ಕಾಣಿರೋ rajesha hayamukha JANMA SAPHALA KAANIRO VADIRAJA STUTIH. Show all posts

Thursday, 26 December 2019

ಜನ್ಮ ಸಫಲ ಕಾಣಿರೋ ankita rajesha hayamukha JANMA SAPHALA KAANIRO VADIRAJA STUTIH

ರಾಗ : ಮುಖಾರಿ
1st Audio by Vidwan Sumukh Moudgalya



"ಜನ್ಮ ಸಫಲ ಕಾಣಿರೋ...."
ರಚನೆ : ಶ್ರೀ ವಿಶ್ವೇಂದ್ರತೀರ್ಥರು
(ಈಗಿರುವ ಸೋದೆಯ ಗುರುಗಳಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥರ ಪರಮಗುರುಗಳು)  ಅಂಕಿತ : ರಾಜೇಶಹಯಮುಖ


ಜನ್ಮ ಸಫಲ ಕಾಣಿರೋ ।ನಮ್ಮ
ಗುರುವಾದಿರಾಜರಾಯರ ಕಂಡು ॥ಪ॥ 

ಯುಕ್ತಿಮಲ್ಲಿಕೆಯೆಂಬ ಗ್ರಂಥ ಮಾಡಿಹರು
ಮತ್ತೆ ಮುತ್ತಿನ ಸಿಂಹಾಸನವನೇರಿಹರು
ಮತ್ತೆ ದುರ್ವಾದಿಭಗಳಿಗೆ ಮೃಗೇಂದ್ರರು
ಸೂತ್ರನಾಮದಿ ಮುಂದೆ ಮೆರೆವರು ॥೧॥

ವ್ಯಾಸಕೂಟಗಳಲ್ಲಿ ಶ್ರೇಷ್ಠರಾಗಿಹರು
ದಾಸಕೂಟಗಳಲ್ಲಿ ರತ್ನದಂತಿಹರು
ಭಾಸುರಕಾಯದಿ ನೂರಇಪ್ಪತ್ತು
ವರ್ಷಗಳೊಳಗಿದ್ದು ಮೆರೆದವರು ॥೨॥

ಮೂಜಗದೊಳಗಿಂತ ಗುರುಗಳೆಲ್ಲಿಹರು
ಕಂಜಸುತನಪದವೇರುವವರು
 ರಾಜೇಶಹಯಮುಖ ಕಿಂಕರಾಗ್ರಣಿಗಳು
ರಾಜಿಪ ಶ್ರೀಸೋದಾಪುರದೊಳಗಿಹರು
*********

ಜನ್ಮದ ಫಲ ಕಾಣಿರೋ..