ಜಯ ಜಯ ಶ್ರೀ ಹಯವದನ ಜಯ ಜಯ ಶ್ರೀ ಖಳದಮನ
ಜಯತು ಸಜ್ಜನಸದನ ಸಕಲ ಆಭರಣ ಪ.
ರಾಘವಾನ್ವಯಸೋಮ ಖರನಿಶಾಚರ ಭೀಮ
ಸಕಲ ಸದ್ಗುಣ ಧಾಮ ಸೀತಾಭಿರಾಮ
ಕಾಮಿನೀಜನಕಾಮ ಶರಣಪಾಲಕ ಧಾಮ
ಸ್ವಬಲ ಪಾಲಿತ ರಾಮ ಪಟ್ಟಾಭಿರಾಮ 1
ಯಾದವಾನ್ವಯಜಾತ ವರಸತ್ಯಭಾಮೇತ
ವ್ಯಾಸರಾಯಸನ್ನುತ ಸಕಲವಾಗ್ವಿದಿತ
ಕಂಜಾಸನಾದಿಸುತ ಕಮಲಮಾರ್ಗಣಪಿತ
ಸರಸರುಕ್ಷ್ಮಿಣೀಸಕಲೇಷ್ಟದಾತ2
ವಾಸಿಷ್ಠಕುಲವಾರ್ಧಿ ಸತ್ಕಳಾಧರರೂಪ
ಮಧ್ವಾರ್ಯ ಸದ್ರೂಪ ದಳಿತÀಬಹುತಾಪ
ಮಾಯಿಜನ [ಧೃ] ತಕೋಪ ಕೃತಸದ್ವೀಕ್ಷೋ[ದ್ದೀ]ಪ
ಸೃತಾನಿ ಸತ್ಸುಖರೂಪ ಹಯವದನ ರೂಪ 3
***
ಜಯ ಜಯ ಶ್ರೀ ಹಯವದನ ಜಯ ಜಯ ಶ್ರೀ ಖಳದಮನ
ಜಯತು ಸಜ್ಜನ ಸದನ ಸಕಲ ಆಭರಣ ||ಪ||
ರಾಘವಾನ್ವಯಸೋಮ ಖರನಿಶಾಚರ ಭೀಮ
ಸಕಲ ಸದ್ಗುಣಧಾಮ ಸೀತಾಭಿರಾಮ
ಕಾಮಿನೀಜನಕಾಮ ಶರಣಪಾಲಕ ಧಾಮ
ಸ್ವಬಲ ಪಾಲಿತ ರಾಮ ಪಟ್ಟಾಭಿರಾಮ ||೧||
ಯಾದವಾನ್ವಯಜಾತ ವರಸತ್ಯಭಾಮೇತ
ವ್ಯಾಸರಾಯಸನ್ನುತ ಸಕಲವಾಗ್ವಿದಿತಾ
ಕಂಜಾಸನಾದಿನುತ ಕಮಲಮಾರ್ಗಣಪಿತ
ಸರಸ ರುಕ್ಮೀಣೀಕಾಂತ ಸಕಲೇಷ್ಟದಾತ ||೨||
ವಾಸಿಷ್ಠಕುಲವಾರ್ಧಿ ಸತ್ಕಳಾಧರರೂಪ
ಮಧ್ವಾರ್ಯ ಸದ್ರೂಪ ದಳಿತಬಹುತಾಪ
ಮಾಯಿಜನಧೃತಕೋಪ ಕೃತಸದ್ವೀಕ್ಷೋದ್ದೀಪ
ಸೃತಾನಿ ಸತ್ಸುಖರೂಪ ಹಯವದನರೂಪ ||೩||
jaya jaya shri hayavadana jaya jaya shri khaLadamana
jayathu sajjana sadana sakala aabharaNa ||p||
raaghavaanvayasoma kharanishaachara bhima
sakala sadguNadhaama sithaabhiraama
kaaminijanakaama sharaNapaalaka dhaama
svabala paalitha raama paTTaabhiraama ||೧||
yaadavaanvayajaatha varasathyabhaametha
vyaasaraayasannutha sakalavaagvidithaa
kamjaasanaadinutha kamalamaargaNapitha
sarasa rukmiNikaamtha sakaleshhTadaatha ||೨||
vaasishhThakulavaardhi sathkaLaadhararupa
madhvaarya sadrupa daLithabahuthaapa
maayijanadhrrithakopa krrithasadvikshhoddipa
srrithaani sathsukharupa hayavadanarupa ||೩||
***