Showing posts with label ಒಡೆಯ ಹರಿಸರ್ವೋತ್ತಮನೆಂಬ ದೃಢ ಜ್ಞಾನಿಗಳೆ ವೈಷ್ಣವರಲ್ಲದೆ purandara vittala. Show all posts
Showing posts with label ಒಡೆಯ ಹರಿಸರ್ವೋತ್ತಮನೆಂಬ ದೃಢ ಜ್ಞಾನಿಗಳೆ ವೈಷ್ಣವರಲ್ಲದೆ purandara vittala. Show all posts

Tuesday, 3 December 2019

ಒಡೆಯ ಹರಿಸರ್ವೋತ್ತಮನೆಂಬ ದೃಢ ಜ್ಞಾನಿಗಳೆ ವೈಷ್ಣವರಲ್ಲದೆ purandara vittala

ರಾಗ ಧನಶ್ರೀ ಆದಿತಾಳ

ಒಡೆಯ ಹರಿಸರ್ವೋತ್ತಮನೆಂಬ
ದೃಢ ಜ್ಞಾನಿಗಳೆ ವೈಷ್ಣವರಲ್ಲದೆ ,ಇಂಥ
ತುಡುಗ ಮುಂಡೆಗಂಡರಿಗಿನ್ನು ವೈಷ್ಣವ ಸಲ್ಲುವದೆ ||

ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡು ನಾಮ ತೀಡಿಕೊಂಡು
ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡಿನ್ನು
ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರೆಂದ್ಹೇಳಿಕೊಂಬ
ಬಡ್ಡೀಧಗಡೀ ಮಕ್ಕಳಿಗಿನ್ನು ವೈಷ್ಣವ ಸಲ್ಲುವದೆ ||

ಭಾಗವತರನ್ನೆ ಕಂಡು ಕಂಡ್ಹಾಂಗೆ ನಿಂದೆ ಮಾಡುತ
ಸೋಗಿಲಿರುವ ಜೋಗೀ ತೊತ್ತಿನ ಮಕ್ಕಳಾದವರು
ಈಗ ನಾವು ಶ್ರೇಷ್ಠರೆಂದು ಹೇಳಿಕೊಂಡು ತಿರುಗುವಂಥ
ಗೂಗೆಮೋರೆ ನೀಚರಿಗಿನ್ನು ವೈಷ್ಣವ ಸಲ್ಲುವದೆ ||

ಗುರು ಮಧ್ವಾಂತರ್ಯಾಮಿಯಾದ ಪುರಂದರವಿಠಲನ ಮಹಿಮೆ
ಸ್ಥಿರವಾಗಿ ನಂಬದೆ ಇರುವ ಗರುವಿನ ಮನುಜರು
ಗುರುಮಂತ್ರ ಉಪದೇಶ ತಾರತಮ್ಯಜ್ಞಾನವಿಲ್ಲದಂಥ
ಪರಮ ಚಂಡಾಲರಿಗಿನ್ನು ವೈಷ್ಣವ ಸಲ್ಲುವದೆ ||
***

pallavi

oDeya hari sarvOttamanemba drDha jnAnigaLe vaiSNavarallade intha duDuga muNDe gaNDariginnu vaiSNava salluvade

caraNam 1

gaDDa mIse bOLisi koNDu goTTu nAma nIDikoNDu aDDA diDDi muregaLa baDidu konDinnu
doDDa doDDa mAtugaLADi doDDavarenda hELikomba baDDHIdagaDi makkaLiginnu vaiSNava salluvade

caraNam 2

bhAgavataranne kaNDu kaNDhAnge ninde mADuta sOgiliruva jOgI tottina makkaLAdavaru
Iga nAvu shrESTharendu hELi koNDu tiruguvantha gUge mOre nIcariginnu vaiSNava salluvade

caraNam 3

guru madhvAntaryAmida purandara viTTala mahime sthiravAgi nambade iruva garuvina manujaru
guru mantra upadEsha tAtatamya jnAnavilladantha parama caNDAlariginnu vaiSNava salluvade
***