Showing posts with label ಮಾರನೈಯ್ಯನೆ ಕೇಳಾಕಲಿವ್ಯಾಪ್ತಿ ಆದದ್ದು pranesha vittala. Show all posts
Showing posts with label ಮಾರನೈಯ್ಯನೆ ಕೇಳಾಕಲಿವ್ಯಾಪ್ತಿ ಆದದ್ದು pranesha vittala. Show all posts

Friday, 15 November 2019

ಮಾರನೈಯ್ಯನೆ ಕೇಳಾಕಲಿವ್ಯಾಪ್ತಿ ಆದದ್ದು ankita pranesha vittala

by ಪ್ರಾಣೇಶದಾಸರು
ಮಾರನೈಯ್ಯನೆ ಕೇಳಾಕಲಿವ್ಯಾಪ್ತಿ ಆದದ್ದು |ಆರಾ ಮುಂಧೇಳಿ, ಎನ್ನುಬ್ಬಸ ಕಳಕೊಳ್ಳಲ್ಯೋ ಪ

ನಳ ಪ್ರಮುಖರು ತೋಟಕ ಬೀಜ ಬಿತ್ತಿ ನೀರೆರ |ಧಾಳು, ನಾಟಲಿಲ್ಲೆಂದವರಾಸಿ ಗೊರವ ಬಾಳು1

ನಳ ಪ್ರಮುಖರು ಪೂಜಿಸಿದ ಗುಡಿ ಹಾಳು |ಹಲವರು ಬಳಸಲು ಈಚಲ ಹಾಳು 2

ಜಲ ತೃಣ ದುರ್ಲಭ ವೈದನ ಹಾಳು |ಬೆಳದೀತೆ ಭೂಪುರಾ ಎಂಬಾಸಿ ಹಾಳು 3

ಹೊನ್ನಹಳ್ಳಿ ದೊಡ್ಡವು ಕಲ್ಲೂರು ಮಣ್ಣೂರು |ಅನ್ನಿಲ್ಲ ದ್ವಿಜರಿಘೊಟ್ಟಿ ತುಂಬಾ ಹೆಸರೂರು 4

ಊರ ಮುಂದಿದ್ದಷ್ಟೆವೆ ಅಡವಿ ಭಾವಿ ಮೀರಿ |ದೂರ ಹೋದರೆ ಹಾಳ್ಕೇರಿ ನೀರಲಕೇರಿ 5

ಅಧಮರು ಹೊನ್ನಾಕುಪ್ಪಿ ಛತ್ರವ ಪಡವರು |ಬುಧರ ಸದನಗಳಾದವು ತಿಪ್ಪಿ ತೆವರೂ 6

ಕನಸವಿ ರಳಮತ ಕೈಯೋಳಗಲಗೂ |ಅನುಚಿತದಿಂದ ವಿಪ್ರರಾದರು ಭಣಗೂ 7

ಸುಳ್ಳೆಷ್ಟು ಹಾಳಭಾವಿ ಗುಂಡಸಾಗರೆಂಬೋರು |ಎಲ್ಲೆಲ್ಲಿ ನೋಡೆ ಗುಡ್ಡಾ ಇಲ್ಲ ಕಲ್ಲೆಂಬೋರು8

ಸೊನ್ನವೆಂಬಾರೂರೀಗೆ ಭಂಗಾರ ಗೊಂಡೆಂಬರೂ |ಸಣ್ಣ ಹಳ್ಳಿಗೆ ಚನ್ನ ಪಟ್ಟಣೆಂಬುವರೂ9

ಬೆಲ್ಲಾದ ಮೊರಡಿ ಹತ್ತಿಗುಡ್ಡಾ ಯಮ್ಮಿಗುಡ್ಡೆಂಬೋರು |ಅಲ್ಲೆಲ್ಲಿ ವ್ರಾತ್ಯರೇವೆ ಬಲುಗಿಂಚರಿಹರು 10

ಹುಲಿಗುಡ್ಡಾ ಕರಡಿ ಚಿರ್ಚಾ ದೇಶದೊಳೆಲ್ಲಾ |ಸಲಹೋದು ನೀ ಬಲ್ಲಿ ಪ್ರಾಣೇಶ ವಿಠಲಾ 11
********