ಗೌರಿವರನೆ ಕಾಯೊ ಎನ್ನ
ಧಾರುಣಿಯೊಳು ರಾಯಕುಪ್ಪಿಸುಸದನ ಪ
ಮೂರುಲಿಂಗ ಸ್ವರೂಪದಲಿಯನ್ನ
ಮೂರು ತಾಪಗಳ ನೋಡಿಸಿ ಕರುಣದಲಿ
ಮೂರು ಸಾಧನವ ನೀಡುತಲಿ ಬಿಂಬಾ
ಮೂರುತಿಯನುಮನದಿ ಕಾಂಬುವಂದದಲಿ 1
ಕರುಣಾ ಕಟಾಕ್ಷದಿ ನೋಡೋ ಸದಾ
ಕರಿವರದನ ಗುಣಗಳನೆ ಕೊಂಡಾಡೋ
ಹರಿ ಭಕುತರ ಸಂಗ ನೀಡೋ ಭವ
ಶರಧಿಯಿಂದೆನ್ನನುದ್ಧರಿಸಿ ಕಾಪಾಡೋ 2
ಪಂಚಬಾಣನಗೆಲಿದಧೀರಾ ದ್ವಿ
ಪಂಚ ಕರಣಗಳಿಂ ಮಾಡಿಸು ಸದ್ವ್ಯಾಪಾರಾ
ಪಂಚಮುಖನೆ ಶ್ರೀಕಾರ್ಪರ ನರ
ಪಂಚಾನನಂಘ್ರಿ ಪಂಕಜ ಮಧುಕರ 3
****