Showing posts with label ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ anantadreesha VARADA VISHNU TEERTHAA NEE KODU KARUNADI VISHNU TEERTHARA STUTIH. Show all posts
Showing posts with label ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ anantadreesha VARADA VISHNU TEERTHAA NEE KODU KARUNADI VISHNU TEERTHARA STUTIH. Show all posts

Sunday, 5 December 2021

ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ ankita anantadreesha VARADA VISHNU TEERTHAA NEE KODU KARUNADI VISHNU TEERTHARA STUTIH

ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ
ಪುರುಷಾರ್ಥ ||pa||

ವರದ ಅಭೀಷ್ಟೆಯ ಕರದು ಎನಗೆ ನೀ
ವರದನೆಂಬೊ ನಿನ್ನ ಬಿರುದನ ರಕ್ಷಿಸು ||a.pa||

ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ
ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ
ಸುಜನರ ತಾಪಕೆ ವ್ಯಜನನು ನೀನೂ
ಸುಜನಕಲ್ಪತರು ಕುಜನಕುಠಾರಾ ||1||

ನಂದನಂದನನೂ ಅವನಿನ್ನ ಬಂಧನದೊಳಗಿಹನೂ
ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ
ನೊಂದೆನು ಬೆಂದೆನು ಬಂದೆನು ನಿನ್ನಲಿ
ಕಂದನ ಲಾಲಿಸು ಒಂದಿನ ಬಿಡದೆ ||2||

ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ
ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ
ಅರಿತು ಅನಂತಾದ್ರಿ ನಿರತನ ತೋರಿಸು
ತ್ವರತ ಮೋದ ಪುರನಿರತ ಸದ್ಗುರುವೆ ||3||
*******