Showing posts with label ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ kamalanabha vittala HARISIRI RAMANIYE KARAGALA MUGIYUVE VARAMATI NEEDENAGE. Show all posts
Showing posts with label ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ kamalanabha vittala HARISIRI RAMANIYE KARAGALA MUGIYUVE VARAMATI NEEDENAGE. Show all posts

Tuesday, 5 October 2021

ಹರಿಸಿರಿ ರಮಣಿಯೆ ಕರಗಳ ಮುಗಿಯುವೆ ವರಮತಿ ನೀಡೆನಗೆ ankita kamalanabha vittala HARISIRI RAMANIYE KARAGALA MUGIYUVE VARAMATI NEEDENAGE




kruti by Nidaguruki Jeevubai


ಹರಿಸಿರಿ ರಮಣಿಯೆ ಕರಗಳ ಮುಗಿಯುವೆ

ವರಮತಿ ನೀಡೆನಗೆ ಪ


ಸರಸಿಜಾಕ್ಷನ ವಕ್ಷಸ್ಥಳದಿ ನಿವಾಸಿಯೆ

ನಿರುತದಿ ಹರಿಪಾದ ಸ್ಮರಣೆ ಎನಗೆ ಕೊಡು ಅ.ಪ


ಮಂದರೋದ್ಧರ ಗೋವಿಂದ ಗುಣಗಳಾ-

ನಂದದಿ ಸ್ತುತಿಸಿ ಹಿಗ್ಗುವ ಜನನಿ

ಇಂದಿರೆ ರಮೆ ಭಾರ್ಗವಿಯೆ ನಿನ್ನಯ ಪಾದ

ದ್ವಂದ್ವಕೆ ನಮಿಪೆ ಸುಗಂಧಿ ಸುಂದರಿಯೆ 1


ಪರಮಪುರುಷ ಪುರುಷೋತ್ತಮನರಸಿಯೆ

ಪರಮ ಮಂಗಳೆ ಪಾವನಿ ಜನನಿ

ಸುರರು ಕಿನ್ನರರು ಕಿಂಪುರುಷರು ಸ್ತುತಿಪರು

ವರ ಮಹಾಲಕ್ಷ್ಮಿ ಸುಂದರಿ ಜಯ ಜಯ ಎಂದು 2


ಗಂಗಾಜನಕ ಪಾಂಡುರಂಗ ನಿಜ ಸತಿ

ಭೃಂಗಕುಂತಳೆ ಭಾಗ್ಯದ ಖಣಿಯೆ

ಅಂಗಜಜನಕ ವಿಹಂಗವಾಹನನ ಪಾ-

ದಂಗಳ ಸ್ಮರಣೆಲಿ ನಲಿವ ಮನವ ಕೊಡು 3


ಪಕ್ಷಿವಾಹನ ಕಮಲಾಕ್ಷನ ಮಹಿಮೆಯ

ವೀಕ್ಷಿಸಿ ಮನದಿ ಹಿಗ್ಗುವ ಜನನಿ

ರಾಕ್ಷಸನಾಮ ವತ್ಸರದಲಿ ಭಕುತರ

ಮೋಕ್ಷದಾತನು ಸಲಹುವ ಸುಜನರನು4


ಕಮಲಸಂಭವ ಕಮಲಾಲಯೆ ಹರಿಪಾದ

ಕಮಲಭೃಂಗಳೆ ಹಿರಣ್ಯಹರಿಣಿ

ಕಮಲನಾಭ ವಿಠ್ಠಲನೊಡಗೂಡಿ ಹೃ-

ತ್ಕಮಲದಿ ಶೋಭಿಸು ಎನುತ ಸ್ತುತಿಸುವೆನು 5

***