Showing posts with label ನಿನ್ನವನೊ ನಿನ್ನವನೊ ನೀರಜಾಕ್ಷಾ janardhana vittala. Show all posts
Showing posts with label ನಿನ್ನವನೊ ನಿನ್ನವನೊ ನೀರಜಾಕ್ಷಾ janardhana vittala. Show all posts

Friday, 21 May 2021

ನಿನ್ನವನೊ ನಿನ್ನವನೊ ನೀರಜಾಕ್ಷಾ ankita janardhana vittala

ನಿನ್ನವನೊ ನಿನ್ನವನೊ ನೀರಜಾಕ್ಷಾ l

ಅನ್ಯರಿಗೆ ಅಲ್ಪರಿಯೇ ಅನಿಮಿತ್ತ ಬಂಧೂ ll ಪ ll


ವಿಜಯರಾಯರ ಪಾದ ನಿಜವಾಗಿ ನೆರೆನಂಬಿ l

ಮೂಜ್ಜಗದೊಳಗೆ ಮುರಾರಿ ನಿನ್ನ l

ವ್ಯಾಜವಿಲ್ಲದ ರಾಜ ಪದವಿ ಸೇರಿಸುವ ಶಿರಿ l

ರಾಜಾಧಿರಾಜ ಹೇ ರಾಜಾನಂತನಿಭನೆ ll 1 ll


ಅರೆಮರೆಯಾಗೊಳದಂತೆ ಆಚರಿಪದೆ ಇಂದು l

ವರಿಸಿ ಬೇಡಿದೆ ವರವ ಪರಿಪರಿಯಲಿ l

ಪರಿಪೂರ್ಣ ಜ್ಞಾನಿಯೇ ಪರಸುಖವ ಪೂರ್ತಿಸುವ l

ಶರಣ ಜನ ಮನೋಹಾರ ಶ್ರೀ ಗುರುಗತ ಸ್ವಾಮೀ ll 2 ll


ಕೀರ್ತಿವಂತನೆ ಎನ್ನ ಮಾತು ಮನ್ನಿಸಬೇಕೋ l

ಆರ್ತಿ ಸಜ್ಜನರಿಗೆ ಬರಲು ವಳಿತೇ l

ಪಾರ್ಥಸಖ ವರ ಜನಾರ್ದನವಿಟ್ಠಲರೇಯಾ l

ಧಾರ್ತರಾಷ್ಟ್ರನ ವದದು ಧೈರ್ಯಶಾಲಿಯ ಮಾಡೋ ll 3 ll

***