ಮುಖ್ಯಕಾರಣ ವಿಷ್ಣು ಸರ್ವೇಶ
ಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ||ಪ||
ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ
ತಿಳಿವ ವಸ್ತುವು ನೀನೆ ತೀರ್ಥಪದನೆ
ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ
ತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧||
ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆ
ಗುಣ ದೇಶ ಕಾಲ ಕರ್ಮದನು ನೀನೆ
ತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆ
ಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ ||೨||
ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭ ಮಹಿ-
ದಾಸ ದತ್ತಾತ್ರಯಾದ್ಯಮಿತ ರೂಪ
ಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದು
ಪೋಷಕನು ಆದೆ ಕೃಪಾಳುವೆ ಶ್ರೀಶ ||೩||
ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-
ಚೇತನನು ಸರಿ ನೀನು ಸುಮ್ಮನಿರಲು
ಯಾತರವ ನಾನಯ್ಯ ನಿನ್ನಧೀನವು ಎಲ್ಲ
ಚೇತನನಹುದೊ ನೀ ಚಲಿಸೆ ಚಲಿಸುವೆನು ||೪||
ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆ
ತಿಳಿಸೊ ಸೋತ್ತಮರೆಲ್ಲ ತಿಳಿದ ಶೇಷ
ತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿ
ಚಲಿಸದಲೆ ಮನ ನಿಲ್ಲಿಸೊ ಗೋಪಾಲವಿಠಲ ||೫||
***
Mukyakarana vishnu sarvesa
Sakya satvara poshya sarasijadyamaresa||pa||
Tilivembuva nine tilidu tilisuva nine
Tiliva vastuvu nine tirthapadane
Tilidudake Pala nine tiliyagodadava nine
Tiliva svatantra ninnadu tiliso sarvesa ||1||
Dhvani varna ubaya Sabdada vacyanu nine
Guna desa kala karmadanu nine
Tanu karana vishaya mana jivasvamiyu nine
Anumahajjagadi bahiramtaradi vyapta ||2||
Vyasakapila hayasya dhanvamtri vrushaba mahi-
Dasa dattatrayadyamita rupa
Isu rupadi j~janavadhikarigaligoredu
Poshakanu Ade krupaluve srisa ||3||
Cetananu nanu ni ceshte madisalaga-
Cetananu sari ninu summaniralu
Yatarava nanayya ninnadhinavu ella
Cetananahudo ni calise calisuvenu ||4||
Tili ennuvudakagi tiliyatakkaddu nine
Tiliso sottamarella tilida sesha
Tilivalli tilipalli tiluvalike ninagi
Calisadale mana nilliso gopalavithala ||5||
***