Showing posts with label ಳಳ- RSS- ಎಚ್ಚರಾಗು ಎಚ್ಚರಾಗು ECHCHARAAGU ECHCHARAAGU rss. Show all posts
Showing posts with label ಳಳ- RSS- ಎಚ್ಚರಾಗು ಎಚ್ಚರಾಗು ECHCHARAAGU ECHCHARAAGU rss. Show all posts

Friday, 24 December 2021

ಎಚ್ಚರಾಗು ಎಚ್ಚರಾಗು others ECHCHARAAGU ECHCHARAAGU rss

 


RSS song  


ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ

ಭರತಮಾತೆ ಕರೆಯುತಿಹಳು ಓಗೊಡುತ ಬಾರ

ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ?

ತಾಯ ಬಂಧು ಬಿಡಿಸುವಂದು ತೋರಿದಂಥ ಧೈರ್ಯ? ||ಪ||


ಚಲಿಸಲಿಲ್ಲ ಧವಳಗಿರಿಯು ಅಚಲ ನಿಂತ ನಿಲುವು

ನಿಲ್ಲಲಿಲ್ಲ ಕಡಲ ಮೊರೆತ ಕ್ಷಣವು ಇಲ್ಲ ಬಿಡುವು

ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನನೀಡಿ

ನಿನ್ನ ಮನವದೇಕೆ ಬದಲು ಯಾರ ಮಂತ್ರ ಮೋಡಿ? ||೧||


ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ

ದರ್ಪ ದಮನವಿರ್ಪ ಮತಾಂತರದ ವಿಕಟಲೀಲೆ

ಎಚ್ಚರಾಗಿ ಬಾರೋ ಮರೆತು ತುಚ್ಛವಾದ ಭೇದ

ಎಲ್ಲೆ ಮೀರಿ ಮೊಳಗಿ ಬರಲಿ ಐಕ್ಯ ಶಂಖನಾದ ||೨||


ಬೆಳಗು ಧರ್ಮ ಸಂಸ್ಕೃತಿಯನು ಮೆರೆಯಬೇಡ ಎಂದೂ

ಮಾನಧನನು ನೀನು ನಿನ್ನೊಳಿರುವ ರಕ್ತ ಹಿಂದು

ಒರೆಸು ಬಾರೊ ತಾಯ ಮೊಗದ ಕಣ್ಣೀರ ಧಾರೆ

ಸಾರು ಬಳಿಗೆ ಕರೆಯುತಿಹುದು ನಾಡ ಭಾಗ್ಯತಾರೆ ||೩||

***

eccaraagu eccaraagu eccaraagu dhIra

BaratamAte kareyutihaLu OgoDuta baara

elli ninna kShAtratEja meredu niMta Sourya?

tAya baMdhu biDisuvaMdu tOridaMtha dhairya? ||pa||


calisalilla dhavaLagiriyu acala niMta niluvu

nillalilla kaDala moreta kShaNavu illa biDuvu

daNiyalilla gaMge tuMge ninage annanIDi

ninna manavadEke badalu yAra maMtra mODi? ||1||


anyarella tuLivaralla namma nelada mEle

darpa damanavirpa matAMtarada vikaTalIle

eccaraagi bArO maretu tucCavAda BEda

elle mIri moLagi barali aikya SaMKanAda ||2||


beLagu dharma saMskRutiyanu mereyabEDa eMdU

mAnadhananu nInu ninnoLiruva rakta hiMdu

oresu bAro tAya mogada kaNNIra dhAre

sAru baLige kareyutihudu nADa BAgyatAre ||3||

***

ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ

ಭರತಮಾತೆ ಕರೆಯುತಿಹಳು ಓಗೊಡುತ ಬಾರಾ

ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ?

ತಾಯ ಬಂಧ ಬಿಡಿಸುವಂದು ತೋರಿದಂಥ ಧೈರ್ಯ? || ಪ ||


ಚಲಿಸಲಿಲ್ಲ ಧವಳಗಿರಿಯು ಅಚಲ ನಿಂತ ನಿಲುವು

ನಿಲ್ಲಲಿಲ್ಲ ಕಡಲ ಮೊರೆತ ಕ್ಷಣವು ಇಲ್ಲ ಬಿಡುವು

ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನನೀಡಿ

ನಿನ್ನ ಮನವದೇಕೆ ಬದಲು ಯಾರ ಮಂತ್ರ ಮೋಡಿ? || ೧ ||


ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ !

ಉಗ್ರರಟ್ಟಹಾಸ, ಮತಾಂತರದ ವಿಕಟಲೀಲೆ

ಎಚ್ಚರಾಗಿ ಬಾರೊ ಮರೆತು ತುಚ್ಛವಾದ ಭೇದ

ಎಲ್ಲೆ ಮೀರಿ ಮೊಳಗಿ ಬರಲಿ ಐಕ್ಯ ಶಂಖನಾದ || ೨ ||


ಬೆಳಗು ಧರ್ಮ ಸಂಸ್ಕೃತಿಯನು ಮೆರೆಯಬೇಡ ಎಂದೂ

ಮಾನಧನನು ನೀನು, ರಕ್ತ ಭಾರತೀಯವೆಂದು

ಒರೆಸು ಬಾರೊ ತಾಯ ಮೊಗದ ಕಣ್ಣ ನೀರ ಧಾರೆ

ಸಾರು ಬಳಿಗೆ ಕರೆಯುತಿಹುದು ನಾಡ ಭಾಗ್ಯತಾರೆ || ೩ ||

***