..
kruti by pradyumna teertha ಪ್ರದ್ಯುಮ್ನತೀರ್ಥರು
ಪೊರೆಯಬೇಕೋ ಎನ್ನ ಶ್ರೀ ನರ
ಹರಿಯೆ ಕೇಳೋ ಮುನ್ನಾ ಪ
ನೀ ಪೊರೆಯದಿರಲು ಈ ಪೊಡವಿಯೊಳಗೆ
ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ
ನೀರ ಪೊಕ್ಕರು ಬಿಡೆನೋ ಬೆನ್ನಲಿ
ಭಾರ ಪೊತ್ತರು ಬಿಡೆನೋ
ಕೋರೆಯ ಬೆಳೆಸಿ ನೀ ಘೋರ ರೂಪನಾಗಿ
ತಿರುಕನೆಂದು ಪೇಳಲು ಬಿಡೆನೋ 1
ಕೊಡಲಿ ಪಿಡಿಯೆ ಬಿಡೆನೋ ನೀ ಘನ
ಅಡವಿ ಸೇರಲು ಬಿಡೆನೋ
ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ
ಉಡುಗಿ ಜರಿದು ತುರುಗೇರಲು ಬಿಡೆನೋ 2
ಪಾಪಿ ಎಂದು ಎನ್ನ ಜರಿಯದೆ
ಕಾಪಾಡೆಲೊ ಘನ್ನ
ಶ್ರೀ ನರಹರಿಯ ನಾಮಕೆ ಪೋಪದ
ಪಾಪಗಳುಂಟೆ ಜಾಲವ ಮಾಡದೆ 3
***