..
ಸುಳಾದಿ
ಧ್ರುವತಾಳ
ಮೃತ್ಯು ಕಾದಿಹುದಿನ್ನು ವ್ಯರ್ಥವೇತಕೆ ದಣಿವೆಅರ್ತುಕೊ ಇದೆವೇಳೆ ಮರ್ತು ಕೆಡದೆತೀರ್ಥಪಾದನ ಪಾದಕೀರ್ತನೆ ಮಾಡು ಮನದಿಸ್ಫೂರ್ತಿಯ ಮಾಡುವನು ಸಾರ್ಥಕಾಗಿರಾತ್ರಿಹಗಲು ನೀ ತ್ರಿಮೂರ್ತಿಯ ಮರೆಯದೆಗಾತ್ರ ಉಪಯೋಗದ ಚಿಂತೆ ತೊರೆದುಅರ್ಥ ನಿನಗೆ ಮುಖ್ಯ ಅರ್ತುಕೊ ಆವುದೆಂದುವಾರ್ತೆಯ ಬಿಡು ಒಲಿಸಬೇಡ ಅನ್ಯಶ್ರೋತ್ರ ಜಿಹ್ವೆ ನಾಸಿಕಮಾತ್ರದಿ ವಿಷಯದಲ್ಲಿಅರ್ತು ಸಾಧಿಸು ಎಲ್ಲ ಶ್ರೀಹರಿಯಮರ್ತರೆ ಮರೆವೆ ಅರ್ತರೆ ಅರಿವೆನೆಂಬಸ್ಫೂರ್ತಿ ಬರುತಿರಲೊ ಆರ್ತನಾಗಿ ಶಾಸ್ತ್ರಪ್ರತಿಪಾದ್ಯ ಮೂರುತಿ ತಿಳಿದು ಮನದಿಸ್ತೋತ್ರವ ಮಾಡು ನೀ ಸತ್ಪಾತ್ರದಿಂದಯಾತ್ರೆಯು ತೀರ್ಥಗಳು ಎಲ್ಲ ಇದರೊಳುಂಟುಮರ್ತು ಬಿಡಬೇಡವೊ ಶ್ರೀಹರಿಯಕ್ಷೇತ್ರಜ್ಞನಮ್ಮ ಸಿರಿ ಗೋಪಾಲವಿಠಲಮೂರ್ತಿಮಂತನಾಗಿ ಇಪ್ಪ ಎಲ್ಲ ಸ್ಥಳದಿ 1
ಮಠ್ಯತಾಳ
ಧನವೋದನವು ಇನ್ನು ಧನದೊಳಗಿಪ್ಪನ್ನನೆನೆದು ತೆಗೆದುಕೊ ಶೋಧನಮಾಡಿ ನೋಡಿತನುವಿಗೆ ಕೆಲಸವಿಡು ತನುಬಂಧುಗಳ ನೋಡುಎಣಿಕೆಗೆ ತಂದು ಭಾಗವನು ಮಾಡು ನಾಲ್ಕುಎಣಿಸುತಲ್ಲಲ್ಲಿ ನೆನೆ ಎಲ್ಲ ಸ್ಥಳದಿಗುಣ ಹರಿಯದೆಂದು ಗುಪ್ತನಾಗಿ ಇನ್ನುಅಣುಘನಪರಿಪೂರ್ಣ ಗೋಪಾಲವಿಠಲಅನಿಮಿತ್ತ ಬಂಧ್ವೆಂಬ ಗುಣವುಂಟವನಿಗೆ2
ರೂಪಕತಾಳ
ಒಂದು ಅರ್ಥವು ನಿನಗೆ ದೊರಕಿದಡಾಯಿತೆಚಂದದಿ ಚಿಂತಿಸು ಅನಂತಪರಿಯಲ್ಲಿಒಂದುಭಾಗ ದೇವಸಮುದಾಯಕ್ಕೆ ಕೊಡುಒಂದುಭಾಗ ಪಿತೃಗಳಿಗೆ ಇನ್ನು ಮಾಡುಒಂದುಭಾಗ ಪರಿವಾರ ಬಂಧುಗಳಿಗೆಚಂದದಿ ಕೊಟ್ಟು ಆನಂದ ಉಣುಕಂಡ್ಯನಂದಗೋಪನ್ನ ಕಂದ ಗೋಪಾಲವಿಠಲನ್ನಚಂದದಿ ನಿನ್ನ ಮನಮಂದಿರದೊಳು ತಿಳಿ 3
ಝಂಪೆತಾಳ
ಜಯ ಜಯ ಭೀಮಸೇನ ankita gopala vittalaನವೆ ಮುಖ್ಯಸಾಧನ ನಿನಗೆ ನೋಡುಏನು ಧನದಿಂದಾಗೊ ಕರ್ಮವದರೊಳಗುಂಟುಪ್ರಾಣಹಿಂಸರಹಿತಕರ್ಮ ಮಾಡು ನಿತ್ಯಶ್ರೀನಿವಾಸನು ಅದಕೆ ಮೆಚ್ಚುವನುಜಯ ಜಯ ಭೀಮಸೇನ ankita gopala vittalaನಮಯಕಾಯ ಗೋಪಾಲವಿಠಲರೇಯಕಾಣಿಸುವ ನಿನಗೆ ಕರುಣವಮಾಡಿ ನಿರುತ 4
ತ್ರಿಪುಟತಾಳ
ತನುವು ಮಂಟಪಮಾಡು ಮನವೆ ಪೀಠವ ಇಡುನೆನೆದು ಕುಳ್ಳಿರಿಸು ನಿನ್ನ ಒಳಗಿದ್ದ ಮೂರ್ತಿಯಧ್ಯಾನ ಆವಾಹನಾದಿಗಳ ನೆನೆದು ಅಲ್ಲಿಪ್ಪಅಣುಮಹಾಮೂರ್ತಿಗೆ ಅಭಿಷೇಕ ಮಾಡಿಸುಗುಣಮೂರರೊಳಗಿದ್ದ ಹರಿಯ ನೆನೆದುಜಿನಸು ವಸನಾಭರಣ ಧೂಪದೀಪವ ಮಾಡಿನೆನಸು ಗಂಧ ಪುಷ್ಪವನು ಮಿಕ್ಕಾದದ್ದೆಲ್ಲಗುಣ ಮೂರುವಿಧದ ಪದಾರ್ಥಗಳನ್ನೆಲ್ಲನಿನಗೆ ಒಂದು ಉದಕಮಾತ್ರ ದೊರಕಿದರೆಇನಿತು ಪರಿಯು ಎಲ್ಲ ಅದರಿಂದ ಚಿಂತಿಸೊಧನದ ಪೂಜೆಗೆ ಅತ್ಯಾಯಾಸಪಡಲಿಬೇಡಘನದೈವ ನಮ್ಮ ಗೋಪಾಲವಿಠಲರೇಯನಿನಗೆಷ್ಟುಪರಿಯಲ್ಲಿ ಪೊರೆವನವನ ತಿಳಿ 5
ಅಟ್ಟತಾಳ
ಒಳಗೆ ಬಂದರೆ ನಿನ್ನ ಒಳಗೆ ಇರುತಲಿಪ್ಪಸುಳಿಯುತಿಪ್ಪ ನಿನ್ನ ಸುತ್ತ ಬಿಡದೆ ಬೆನ್ನಹಲವುಪರಿಕರ್ಮ ನಿನಗಾಗಿ ಮಾಡುತ್ತಚೆಲುವ ನಿರ್ಲಿಪ್ತನ್ನ ತಿಳಿಯದೆ ಕೆಡುವಿ ಯಾಕೆಸುಲಭವಾಗಿ ಕರತಳದಲ್ಲಿದ್ದಂಥಫಲವ ನೀ ಕಾಣದೆ ಬಲು ದಣಿಸುವುದೇನೊಗೆಳೆಯನಾಗಿ ಪಾರ್ಥಗೊಲಿದ ನಮ್ಮ ಸ್ವಾಮಿಚೆಲುವ ಗೋಪಾಲವಿಠಲರೇಯನ ನೀನುಗಳಿಗೆ ಮರೆಯಬೇಡ ಬಲುಪ್ರಿಯಾ ಬಲುಪ್ರಿಯಾ 6
ಆದಿತಾಳ
ಈವಾಗ ಆವಾಗ ಎಂಬೋದು ಬೇಡವೊದೇವನ ಸ್ಮರಣೆಯು ಬಾಹುದೆ ಕಾಲವುಪಾವಕ ಜಲದಲ್ಲಿ ಆ ವಾಯು ವಿಪ್ರರುಆವ ಸೂರ್ಯ ಅಧಿಷ್ಠಾನದಲ್ಲಿದ್ದುದೇವನ ಸ್ಮರಣೆಯು ಬರುತಿರಲಿ ಕಂಡ್ಯಾಕಾವನು ಬಿಡನಿನ್ನು ಗೋಪಾಲವಿಠಲ 7
ಜತೆ
ಗೃಹಮೇಧಿ ಮಾಡಿ ನಿನ್ನ ಗೃಹದೊಳಗಿಪ್ಪಂಥಶ್ರೀಹರಿ ಗೋಪಾಲವಿಠಲನ್ನ ನೆನೆಕಂಡ್ಯಾ
***