Showing posts with label ಪಾಲಿಸು ಪಾಲಿಸು ಪಾಲಯಮಾಂ kamalanabha vittala. Show all posts
Showing posts with label ಪಾಲಿಸು ಪಾಲಿಸು ಪಾಲಯಮಾಂ kamalanabha vittala. Show all posts

Friday, 27 December 2019

ಪಾಲಿಸು ಪಾಲಿಸು ಪಾಲಯಮಾಂ ankita kamalanabha vittala

by ನಿಡಗುರುಕಿ ಜೀವೂಬಾಯಿ
ಪಾಲಿಸು ಪಾಲಿಸು ಪಾಲಯಮಾಂ ಸತತಇಂದಿರಾದೇವಿ ಪ

ಪಾಲಿಸು ಪನ್ನಗವೇಣಿಪಾಲಿಸುಪಂಕಜಪಾಣಿಪಾಲಿಸು ಗುಣಗಣ ಶ್ರೇಣಿ ಪಾಹಿನಿತ್ಯ ಕಲ್ಯಾಣಿ ಅ.ಪಬಾಲಕನು ತಾನಾಗಿ ಗೋಪಿಗೆಬಾಲಲೀಲೆಗಳನ್ನು ತೋರಿದಶ್ರೀಲಲಾಮನನ್ನು ಮೆಚ್ಚಿಮಾಲೆಹಾಕಿದಂಥ ಲಕ್ಷ್ಮಿ 1

ಅಂಬುಧಿಯೊಳ್ ಶಯನಿಸಿದಕಂಬುಕಂಧರಹರಿಯಬೆಂಬಿಡದೆ ಸೇವಿಪ ಭಕ್ತ ಕು-ಟುಂಬಿ ನಿನ್ನ ನಂಬಿದವರ 2

ನಿನ್ನನೆ ನಾನಂಬಿರುವೆ-ನನ್ಯರ ನಾಶ್ರಯಿಸದಲೆಸನ್ನುತಾಂಗಿ ಎನ್ನ ಮನದ-ಲಿನ್ನು ಹರಿಯಪಾದತೋರು3

ಸರಸೀಜಾಸನ ಮಾತೆಸ್ಮರಿಸುವೆ ನಿನ್ನಯಪಾದಸ್ಮರಣೆ ಮರೆಯದಂತೆ ಕೊಟ್ಟುಹರಿಯ ತೋರು ಹರುಷದಿಂದ 4

ಕಮಲೇ ಹೃತ್ಕಮಲದಿ ಶ್ರೀಕಮಲನಾಭ ವಿಠ್ಠಲಮಿನುಗುವಂಥ ಸೊಬಗು ತೋರುವಿನಯದಿಂದ ನಮಿಪೆ ನಿನ್ನ 5
*******