Showing posts with label ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು shanti. Show all posts
Showing posts with label ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು shanti. Show all posts

Sunday 1 August 2021

ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ಗೋಪಿ : ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು

ಕಾಣದರ್ಮನೆಯ ಸೇರಿ ತ್ರಾಣ ಬಲಹರಣವ

ಮಾಡುವೇಜಾಣ ಪ


ಕೃಷ್ಣ : ನೀರೆ ಗೋಪಿಯೆ ನಿನ್ನ ದ್ವಾರದೊಳಿರುವೆ

ತೋರದೆನ್ನನು ನೀನು ಭಾರಿ ಬಳಲಿರುವೆ ನೀರೆ 1


ಗೋಪಿ : ಹತ್ತಿರದಲ್ಲಿದ್ದು ನೀನು ಇತ್ತೆನಗೆ ತೋರದಂತೆ

ಚಿತ್ತ ಬೋರ್ಗರೆಳುಕೃಷ್ಣ ಮತ್ತೆನಾ ಬಿಡುವೆನೆ

ನಿನ್ನನು ``ವೇಣು 2


ಕೃಷ್ಣ : ಅಕ್ಷಿಯೊಳಗೆ ನಿನ್ನ ಸಾಕ್ಷಿಯಾಗಿರುವೆ

ಈಕ್ಷಿಸಲರಿಯೆ ನೀ ಕುಕ್ಷಿ ತುಂಬಿರುನೆ | ನೀರೆ 3


ಗೋಪಿ : ಆರು ಬಾಗಿಲು ನೀಗಿ ಜೋರಗಂಡಿಯೊಳ್ ಪೋಗಿ

ಏರಿ ಮೇಲಣ ತುದಿಯೋಳ್ ಸಾರಿ ಸಕಲಧ್ವನಿಗಳ

ಮಾಡುವೆ ||ವೇಣು|| 4


ಕೃಷ್ಣ : ಮನುಮುನಿ ಜನರೆಲ್ಲಾ ವಿನಯದಿಂ ಪಿಡಿದು

ಘನಸುಖ ಪಡುವರು ಮನದೊಳಗರಿದು ||ನೀರೆ|| 5


ಗೋಪಿ : ಆಗಮ ಸಂಚಿತ್ತ ಭೋಗ ಸಂಸಾರವನ್ನೆಲ್ಲಾ

ನೀಗಿಸುವೆ ನೀನವರಾ ಯೋಗೀ

ಜರೆನಿಸಿದೆಲ್ಲಾ ||ವೇಣು || 6


ಕೃಷ್ಣ : ನಿಮಿಷ ಮಾತ್ರದಿ ಸುಖವ ಮನದೇಸ್ಮರಿಸಿ

ಅಮಮ ಘನಾನಂದ ರಮಿಸು ಸ್ವಸುಖವಿ ||ನೀರೆ|| 7


ಗೋಪಿ : ಕಣ್ಣ ಸನ್ನೆಯ ಮಾಡಿ ಅನ್ಯರ್ಮನ್ಮನೆಗಳಲ್ಯೋಡಿ

ಬೆಣ್ಣೆ ಪಾಲುಮೊಸರು ಸುರಿದು ಬನ್ನಣೆ

ಮಾತುಗಳಾಡುವೆ ||ವೇಣು || 8


ಕೃಷ್ಣ : ಧೊರೆಯಾಗಿರುವೆ ನಾನು ತಿರಿದುಣ್ಣಲರಿಯೆ

ಬೆರತು ಎನ್ನೊಳು ನೀನು

ಅರಿವಿನಿಂದರಿಯೆ || ನೀರೆ|| 9


ಗೋಪಿ : ಕಂತು ಪಿತನೆ ನಿನ್ನ ಭ್ರಾಂತಿ ಹತ್ತಿತು ಎನಗೆ

ಸಂತಸದೊಳು ನಿಜ ಶಾಂತಿಪಾಲಿಪ

ಗುರುವರ ||ವೇಣು || 10

***