ಬಾರಾ ನಾನರಿಯೆ ಸಿರಿಧರ ಮಾರ ಪ.
ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು 1
ಕಂಡ ಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡಾರೀಕಾಕ್ಷ ಪುರುಹೂತÀವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸೊ ದುರುಳರ ಸಂಗವ ಬಿಡಿಸೊ 2
ಶ್ರೀಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಿಡಿಸುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು 3
***