ಬಿಟ್ಟು ಬನ್ನಿರೊ ಸಂಸಾರದ್ಹಂಬಲ ಪ.
ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೊ ಅ.ಪ.
ಹೆಂಡಿರುಮಕ್ಕಳು ಎಂಬೋ ಹಂಬಲ ಬೇಡಿರೊಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯನು 1
ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು 2
ನಡುಬೀದಿಯಲಿ ಇವನ ಎಳೆದು ಸೆಳೆವರೊಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ 3
ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊಚಂಡ ಯಮನದೂತರು ಬಂದು ಎಳೆದು ಒಯ್ವರೊ4
ಮುಟ್ಟಿ ಭಜಿಸಿರೊ ಹಯವದನನಂಘ್ರಿಯನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವೆನೊ 5
***
ಬಿಡದೆ ಭಜಿಸಿ ಬೊಮ್ಮ ಮೃಡ ಮುಖ್ಯ ಸುರರಿಗೆಡೆಯನೆನಿಪ ಮುದ್ದು ಉಡುಪಿಯ ಕೃಷ್ಣನ ಪ.
ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-ರಡಿಗಡಿಗವರ ವಾಂಛಿತ ವÀಸ್ತುವಕಡೆದು ಕೊಡುವೆನೆಂದು ಕಡೆಗೋಲ ನೇಣನೆಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ 1
ಹರಿಸರ್ವೋತ್ತಮನೆಂಬೊ ಪರಮಸಿದ್ಧಾಂತಕ್ಕೆ ಮ-ಚ್ಚರಿಸುವ ಕುಮತದ ಕುಜನರಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದುವರಪಾಶದಂಡಧಾರಿಯಾಗಿ ತೋರಿಪ್ಪನ 2
ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬಂದನಿಕರಕ್ಕೆ ಪೇಳಲು ದ್ವಾರಕಾಪುರಿಯಸುಖತೀರ್ಥಮುನಿಗೆ ಸುಖಕರನಾಗಿ ಬಂದಅಕುಟಿಲ ಕೃಷ್ಣ ಹಯವದನರಾಯನ 3
***