Showing posts with label ವಿದ್ಯಾಪ್ರಸನ್ನ ಶ್ರೀ ಯತಿಕುಲ gopalakrishna vittala vidyaprasanna teertha stutih. Show all posts
Showing posts with label ವಿದ್ಯಾಪ್ರಸನ್ನ ಶ್ರೀ ಯತಿಕುಲ gopalakrishna vittala vidyaprasanna teertha stutih. Show all posts

Monday, 2 August 2021

ವಿದ್ಯಾಪ್ರಸನ್ನ ಶ್ರೀ ಯತಿಕುಲ ankita gopalakrishna vittala vidyaprasanna teertha stutih

ವಿದ್ಯಾ ಪ್ರಸನ್ನ ಶ್ರೀ ಯತಿಕುಲ ಗುರುರನ್ನ

ಸದ್ವ್ಯೆಷ್ಣವ ಘನ್ನ ಪ.

ಸಿದ್ಧಸಾಧನ ಮಧ್ವಮುನಿಯ ಚಿನ್ಹ

ಧರಿಸಿದ ಬಹುಮಾನ್ಯ ಅ.ಪ.

ವಿದ್ಯಾರತ್ನಾಕರ ಯತಿ ಕರಕಮಲದಿ ಜಾತ

ಮುದ್ದು ಕುವರನೀತ

ವಿದ್ಯಾವಾರಿಧಿ ಮುನಿಕರ ಸಂಜಾತ

ಯತಿವರನಾದಾತ

ಮಧ್ವಗ್ರಂಥಗಳ ಮನನ ಮಾಡಿದಾತ

ಬಹುಮತಿಯುತನೀತ

ಬುದ್ಧಿಕುಶಲದಿ ಬುಧರನು ಪೊರೆವಾತ

ಸುಜನರ ಮನದಾತ 1

ವ್ಯಾಸತೀರ್ಥನ ಆಸ್ಥಾನಕೊಡೆಯರಾಗಿ

ದುರ್ಗುಣಗಳ ನೀಗಿ

ಆಸೆಯಿಂದ ಶ್ರೀ ಕೃಷ್ಣನ ಚನ್ನಾಗಿ

ಪೂಜಿಸುತಲಿ ಬಾಗಿ

ದಾಸತ್ವದ ಲಕ್ಷಣ ತಿಳಿದವರಾಗಿ

ವಿಷಯ ಸಂಗ ತ್ಯಾಗಿ

ಪಸನ್ನ ಕೃಷ್ಣನೆಂಬಂಕಿತವನೆ ಇಟ್ಟು

ಪದರಚಿಸಿದ ಗುಟ್ಟು 2

`ವಿ' ಎನ್ನಲು ನರವಿಷಯ ಸಂಗದೂರ

`ಧ್ಯಾ' ಎನೆ ಧ್ಯಾನವರ

`ಪ್ರ' ಎನಲು ಸದ್ಗುಣನು

`ನ್ನ' ಎನ್ನಲು ಶ್ರೀ ನರಹರಿ ತಾನೊಲಿವ

`ತೀ' ಎನೆ ತೀರ್ವ ಭವ

`ರ್ಥಾ' ಎನ್ನಲು ಪುರುಷಾರ್ಥ ಪಡೆದ ಭೋಗಿ

`ರು' ಎನೆ ರುಜುಮಾರ್ಗಿ 3

ವಿದ್ಯಾಪ್ರಸನ್ನತೀರ್ಥರು ಎಂದೆನ್ನುತಲಿ

ಸ್ಮರಿಪರ ಸಲಹುತಲಿ

ಮುದ್ದುಕೃಷ್ಣ ಪಟ್ಟಾಭಿರಾಮನಂಘ್ರಿ

ಸಚ್ಚರಿತ ಪ್ರಸಂಗಿ

ಸದ್ವಿದ್ಯಗಳಿಗೆ ಗರ್ವರಹಿತ ಭಾವ

ಬಹು ಸರಳ ಸ್ವಭಾವ

ಹೃದ್ವನಜಸÀ್ಥನ ಕಾಂಬ ಮುನಿವರೇಣ್ಯ

ಸದ್ಭಕ್ತ ಶರಣ್ಯ 4

ಒಂದು ಅರಿಯದ ಮಂದ ಮತಿಯು ನಾನು

ಕ್ಷಮಿಸು ತಂದೆ ನೀನು

ಕುಂದನೆಣಿಸದೆ ಗುಣಗ್ರಹಿಸುತಲಿನ್ನು

ಶ್ರೀ ಹರಿ ನುಡಿಸಿದನು

ತಂದೆ ಮುದ್ದುಮೋಹನರ ಕೃಪೆಯಿಂದ

ರಚಿತ ಪದದಂದ

ಮಂದರಧರ ಗೋಪಾಲಕೃಷ್ಣವಿಠ್ಠಲ

ಗರ್ಪಿತ ಗುಣಮಾಲ 5

****