Showing posts with label ಜಯ ಮಂಗಳಂ ಮಹಾ ಶುಭಮಂಗಳಂ prasannavenkata. Show all posts
Showing posts with label ಜಯ ಮಂಗಳಂ ಮಹಾ ಶುಭಮಂಗಳಂ prasannavenkata. Show all posts

Monday, 11 November 2019

ಜಯ ಮಂಗಳಂ ಮಹಾ ಶುಭಮಂಗಳಂ ankita prasannavenkata

by ಪ್ರಸನ್ನವೆಂಕಟದಾಸರು
ಜಯ ಮಂಗಳಂ ಮಹಾ ಶುಭಮಂಗಳಂ ಮಂಗಳಂಮದನಜನಕಂಗೆನಿತ್ಯಪ.

ಶಂಕಾಸುರನ ಸೀಳಿ ಶ್ರುತಿಯ ತಂದವನಿಗೆಬಿಂಕದಿಂ ಮಂದರಕೆ ಬೆನ್ನಾಂತಗೆಪಂಕಜಾಸನಗೊಲಿದು ಪ್ರತ್ಯಕ್ಷನಾದವಗೆಶಂಕೆಯನು ಬಿಡಿಸಿ ಶಿಶುವನು ಹೊರೆದಗೆ 1

ವಿತರಣಕೆ ಬಂದು ಬಲಿವಿಭವನಪಹರಿಸಿದಗೆಪತಿತ ಕ್ಷತ್ರಿಯರ ಸಂಹರಿಸಿದವಗೆಸತಿಯ ಕದ್ದವನ ದಶಶಿರಶತಖಂಡಿಸಿದಗೆಪಿತ ಮಾತೆ ಬಂಧನವ ಪರಿಹರಕಗೆ 2

ಮುಪ್ಪುರದ ನಾರಿಯರ ಮನವ ಗೆದ್ದವಗೆತಪ್ಪದೆ ಕಲಿಬಲವ ತರಿದಾತಗೆಸರ್ಪಗಿರಿಯಲಿ ನಿಂತು ನಿತ್ಯಸುಖದಾತನಿಗೆಶ್ರೀಪ್ರಸನ್ವೆಂಕಟೊಡೆಯನೆನಿಪಗೆ 3
********

ಜಯ ಮಂಗಳಂ ಮಹಾ ಶುಭಮಂಗಳಂ ankita prasannavenkata

by ಪ್ರಸನ್ನವೆಂಕಟದಾಸರು
ಜಯ ಮಂಗಳಂ ಮಹಾ ಶುಭಮಂಗಳಂ ಮಂಗಳಂ ಮಧುಹರಗೆ ಮಾವರನಿಗೆ ಪ.

ಶ್ರುತಿಹೃತ ವಿಹೃತನಾದಗೆಕ್ಷಿತಿಭೃತ ವಿಭೃತನಾದಗೆಧೃತಿಜಿತವಿಜಿತ ಕುಪಿತಗೆ ವಿತರಣಾಂತಗೆಪತಿತತನು ಕ್ಷತಕೃತಗೆಕೃತಪೂತಹಿಸತಿನುತಗೆಪತಿವ್ರತ ಮೋಹಿತ ತುರಗಯುತವ್ಯಾಕೃತಗೆ 1

ತತ್ವಾಮೃತ ಸತ್ಯವ್ರತಗೆಮಥÀನಾಮೃತ ದಿತಿಜಾತರ್ಗೆಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆಭ್ರಾತಪಿತ ಸ್ತ್ರೀಸತಿವ್ರಾತಕೆಭೂತಪತಿಗೆ ಜಾತಧರ್ಮಕೆಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ 2

ಅನಿಮಿಷಾನಿಮಿಷ ಮಾನಿಗೆಕನಕಾಕ್ಷಕನಕಕಶ್ಯಪುವಿನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆಆನನದಶದಾನವಮಾನಿನಿಹನನಶೀಲ ಮೋನಾನ್ವಿತಗೆಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ 3
******