Showing posts with label ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ ಪಶುಪತಿ vijaya vittala. Show all posts
Showing posts with label ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ ಪಶುಪತಿ vijaya vittala. Show all posts

Thursday, 17 October 2019

ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ ಪಶುಪತಿ ankita vijaya vittala

ವಿಜಯದಾಸ
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ |
ಪಶುಪತಿ ಗುರು ನಮಿತ ಪಾದಾ |
ಪಂಕಜವ ಪೊಗುಳವೆನು ಪರಿಪಾಲಿಸೆನ್ನ |
ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ

ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ |
ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು |
ಧೈರ್ಯವಂತನು ನೀನಾಗಿ |
ಧೈರ್ಯವಾಗಿದ್ದಾಗ ಜಡಜೀವ ಜಂತುಗಳು |
ವೀರ್ಯದಲಿ ಪೊಕ್ಕು ದುಃಖಾತಿಶಯದಲಿ |
ದುರ್ಯೋನಿ ಮುಖದಿಂದ ಜನನ ಜನಿತನಾದೆ |
ಮರ್ಯಾದೆಗಳು ಇಲ್ಲದೆ ಹರಿಯೇ 1

ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ
ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ |
ಪಥದಲಿ ವಿಷಯೇಂದ್ರಿಗಳು
ಆತ್ಮವಶವಾಗಿ ಹಿತದ ಪ್ರಸಾದದಿಂದ |
ಗತಿ ಅದರಿಂದ ಈ ಸಂಖ್ಯೆಯಿಂದಲಿ |
ಹತವಾಗಿ ಪೋಗಿ ಮರಳೆ ದೇಹವನು |
ತೆತ್ತು ಗತಿ ಪುಣ್ಯವಂತನೈದೆ 2

ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ |
ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ |
ಹವ್ಯ ಕವ್ಯ ಜಾವಳ |
ಇಂದಿಗಾ ಮದುವೆ ಮುಂಜಿ |
ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ |
ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು |
ನೊಂದೆ | ಬಂದೆನೊ ಕೊನೆಯಲಿ 3

ಆರಾದರೂ ಬಂದು ಕಾಸು ಕೊಡದಿದ್ದರೆ |
ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ |
ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ |
ಬೀರುವೆನು ಬೀದಿಯೊಳಗೆ |
ವಾರಣದಿಂದಲಿ ಕರೆದು ಆವನಾದರು ಬಂದು |
ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ |
ಪೋರ ಬುದ್ಧಿಗಳ ಬಿಡದೆ4

ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು |
ಪರಮಾರ್ಥವೆಂದರಿದು ಉತ್ತಮರ ಬಾ ಎಂದು |
ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು |
ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು |
ಇಟ್ಟುಕೊಂಡು ಮನಿಗೆ ಬಂದು |
ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ |
ಪರಿಯಿಂದ ದಿನ ಹಾಕಿದೆ5

ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ |
ಉತ್ತಮರ ಬಳಿಯಲಿ ಕುಳಿತು
ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ |
ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ |
ಮಾತು ಎತ್ತುವನೊ ಅನ್ನಿಗರನ ನ |
ಎಣಿಕೆ ಮಾಡದಲೆ |
ಉನ್ಮತ್ತದಲಿ ಕೆಟ್ಟೆನಯ್ಯಾ6

ಪರಿಯಂತ |
ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು |
ಈ ದುರಾಚಾರಗಳ ಗಣನೆ ಮಾಡದೆ ಇನ್ನು |
ಕಾದುಕೊ ಕಮಲನಾಭಾ |
ಹೋದಪರಾಧಗಳ ನೋಡದಲೆ ದಯದಿಂದ |
ಆದರಿಸಿ ನಿನ್ನ ದಾಸರ ಸಂಗತಿಯನಿತ್ತು |
ಪಾದವನು ಕಾಣಿಸಯ್ಯಾ7
*********