ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಗುರು ನಾಗೇಶ ದಯಗುಣದಲಿ ನೀ ಮಾಡೊ ಭವತಾಪ ನಾಶ ಪ
ಜನ್ಮ ಮರಣಗಳೆಂಬ ಖಚ್ಚಿಖವಡಿಗಳು ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು ಬ್ರಹ್ಮಾನಂದದ ಸುಖ ಭಾಸುದು ಮನದೊಳು ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು 1
ತಾಪತ್ರಯವೆಂಬುದು ಬಲು ಪೀಡಿಯ ಗುಣ ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ ಕೋಪತಾಪವೆಂಬುದು ತದ್ದುದುರೀಯ ಗುಣ ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ 2
ದುರಿತ ಸಂಹಾರ ಸುರಜನ ಸಹಕಾರ ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ ತರಳ ಮಹಿಪತಿಸ್ವಾಮಿ ಘನ ಕೃಪಾಕರ ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ 3
****