..
ಬಾರೆ ರುಕ್ಮಿಣಿ ನಿನ್ನ ಮುಖತೋರೆನಗೆಪಾಟಲಾಗದೆಸಾರ ಶ್ರೀಕೃಷನ್ಣ ತೊಡೆಬಿಟ್ಟುಬಾರೆ ರುಕ್ಮಿಣಿ ಪ.
ಕೃಷ್ಣರಾಯನ ಮನೆಯ ಪಡಸಾಲೆಯೊಳಗೆಪಟ್ಟಿ ಪಟ್ಟಾವಳಿ ಹರವಿಲ್ಲಪಟ್ಟಿ ಪಟ್ಟಾವಳಿ ಹರವಿಲ್ಲ ಕುಂತಿ ಮನೆಯವಿಶಿಷ್ಠ ಸಿಂಹಾಸನವ ತರಿಸೇವ ರುಕ್ಮಿಣಿ ಬಾರೆ1
ಜರದ ಸಿಂಹಾಸನಕೆ ಸರದ ಮಾಣಿಕವು ರಚಸಿಬರೆದಿವೆ ಮ್ಯಾಲೆ ದಶರೂಪಬರೆದಿವೆ ಮ್ಯಾಲೆ ದಿವ್ಯ ದಶರೂಪದಆಸನವ ದೊರೆಗಳು ಏರಿ ಕುಳಿತಾರೆ ಬಾರೆ ರುಕ್ಮಿಣಿ2
ಮುತ್ತಿನ ಸಿಂಹಾಸನಕೆ ಮುತ್ತು ಮಾಣಿಕವೆ ರಚಿಸಿಹತ್ತಾವತಾರವÀ ಬರೆದಿವೆಹತ್ತಾವತಾರ ಬರೆದ ಸಿಂಹಾಸನವಹತ್ತಿ ಪಾಂಡವರು ಕುಳಿತಾರೆ ಬಾರೆ ರುಕ್ಮಿಣಿ 3
ಮಂದಗಮನೆಯರೆಲ್ಲ ಚಂದ್ರಶಾಲೆಯೊಳಗೆಛಂದ ಛಂದದಲಿ ಹೊಳೆಯುತಛಂದ ಛಂದದಲಿ ಹೊಳೆಯುತ ನಿಂತಾರೆಗಂಧ ಕಸ್ತೂರಿ ಉದುರೂತ ಬಾರೆ ರುಕ್ಮಿಣಿ4
ಹರಿಯ ಮಡದಿಯರು ನಮ್ಮ ಕರೆಯ ಬರಲಿಲ್ಲೆಂದುಮರ್ಯಾದೆಯುಳ್ಳ ಶುಕವಾಣಿಮರ್ಯಾದೆಯುಳ್ಳ ಶುಕವಾಣಿ ರಾಮೇಶನಹರದೆಯರಿಗೆ ವಿನಯದಿ ನುಡಿದಳು ಬಾರೆ ರುಕ್ಮಿಣಿ5
****