Showing posts with label ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ ಅನಿಮಿತ್ತ ಬಂಧು shree krishna JANUMA JANUMADALLI KODU KANDYA HARIYE ANIMITTA BANDHU. Show all posts
Showing posts with label ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ ಅನಿಮಿತ್ತ ಬಂಧು shree krishna JANUMA JANUMADALLI KODU KANDYA HARIYE ANIMITTA BANDHU. Show all posts

Tuesday, 9 November 2021

ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ ಅನಿಮಿತ್ತ ಬಂಧು ankita shree krishna JANUMA JANUMADALLI KODU KANDYA HARIYE ANIMITTA BANDHU

Audio by Vidwan Sumukh Moudgalya

tvg

ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ ಪ

ಅನಿಮಿತ್ತ ಬಂಧು ಕೃಷ್ಣ ದಯದಿಂದಲೆನಗೆ ಅ.ಪ

ಮೆರೆವ ಊಧ್ರ್ವ ಪುಂಡ್ರ ಎರಡಾರು ನಾಮವುಕೊರಳೊಳು ತುಲಸಿಯ ವನಮಾಲೆಯುಮೆರೆವ ಶಂಖಚಕ್ರ ಭುಜದೊಳೊಪ್ಪುತ ನಿಮ್ಮಸ್ಮರಿಸುತ್ತ ಹಿಗ್ಗುವ ವೈಷ್ಣವ ಜನುಮವ 1

ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮಹರ ಇಂದ್ರಾದ್ಯಖಿಳರು ತವ ಸೇವಕರುವರ ತಾರತಮ್ಯ ಪಂಚ ಭೇದ ಸತ್ಯವೆಂದುನೆರೆ ಪೇಳುವ ವಾಯುಮತದ ಸುಜ್ಞಾನವ 2

ಸಕಲ ವಿಬುಧೋತ್ತಮರಲ್ಲಿ ನಮ್ರತೆಯುಸುಖ ತೀರ್ಥರಲಿ ಮುಖ್ಯ ಗುರು ಭಾವನೆಯುಮುಕುತಿ ಪ್ರದಾಯಕ ಸಿರಿ ಕೃಷ್ಣ ನಿನ್ನಲ್ಲಿಅಕಳಂಳವಾದ ನವವಿಧ ಭಕುತಿಯನು 3

***