Showing posts with label ಎಂಥಾದ್ದೊ ಹರಿಯ ಕರುಣ ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ shree krishna. Show all posts
Showing posts with label ಎಂಥಾದ್ದೊ ಹರಿಯ ಕರುಣ ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ shree krishna. Show all posts

Wednesday, 1 September 2021

ಎಂಥಾದ್ದೊ ಹರಿಯ ಕರುಣ ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ ankita shree krishna

 ..

ಎಂಥಾದ್ದೊ ಹರಿಯ ಕರುಣ ಪ

ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ ಅ.ಪ

ಅಂತ್ಯವಿಲ್ಲದ ನಿಜಾನಂದ ತೃಪ್ತನು ಗಡಸಂತರೊಕ್ಕುಡಿತೆಯ ಜಲಕೆ ಹಿಗ್ಗುವ ಗಡ 1

ಸನಕಾದಿ ಮುನಿಮನಕೆ ಸಿಲುಕದಗಮ್ಯನು ಗಡನೆನೆವರ ಮನದಣಿಯೆ ತನ್ನ ತೋರುವ ಗಡ2

ಶ್ರ್ರುತಿತತಿಗೆ ಮೈದೋರದತಿ ಮಹಿಮನು ಗಡಮತಿಯುಳ್ಳವನ ಭಕ್ತಿ ಸ್ತುತಿಗೆ ಹಿಗ್ಗುವ ಗಡ3

ಲೋಕ ಪತಿಗಳಿಗೆಲ್ಲ ಒಡೆಯ ತಾನೆ ಗಡಬಾಕುಳಿಕನಾಗಿ ಭಕುತರ ವಶದಲ್ಲಿಪ್ಪ ಗಡ 4

ಆರರೊಳು ಸಡ್ಡೆಯಿಲ್ಲದ ನಿಸ್ಸಂಗನು ಗಡಸಾರಿದವರಿಗೆ ತಂದೆತಾಯಿ ಸಿರಿಕೃಷ್ಣ ಗಡ 5

***