Showing posts with label ತಂದೆ ವೆಂಕಟೇಶನೆಂದೆ ಪುರಂದರದಾಸರ ಪ್ರಿಯ uragadrivasa vittala tandevenkatesha vittala dasa vittala stutih. Show all posts
Showing posts with label ತಂದೆ ವೆಂಕಟೇಶನೆಂದೆ ಪುರಂದರದಾಸರ ಪ್ರಿಯ uragadrivasa vittala tandevenkatesha vittala dasa vittala stutih. Show all posts

Saturday, 1 May 2021

ತಂದೆ ವೆಂಕಟೇಶನೆಂದೆ ಪುರಂದರದಾಸರ ಪ್ರಿಯ ankita uragadrivasa vittala tandevenkatesha vittala dasa vittala stutih

ಶ್ರೀ ಉರಗಾದ್ರಿವಿಠ್ಠಲರಿಗೆ ಸುಮಾರು 80 ಸುಜೀವಿಗಳಿಗೆ ಅಂಕಿತೋಪದೇಶದೊಂದಿಗೆ ದಾಸ ದೀಕ್ಷೆಯನ್ನು ನೀಡಿ ಹರಿದಾಸ ಪಂಥವನ್ನು ಮುಂದುವೆರಿಸಿದ್ದರೆ.( ಶ್ರೀ ತಂದೆ ವೆಂಕಟೇಶ ವಿಠ್ಠಲರಿಗೆ ) ನೀಡಿದ ಅಂಕಿತ ಪದ...

" ರಾಗ : ವಸಂತ ತಾಳ : ಆದಿ 


ತಂದೆ ವೆಂಕಟೇಶನೆಂದೆ । ಪು ।

ರಂದರದಾಸರ ಪ್ರಿಯನಿವನೆಂದೆ ।। ಪಲ್ಲವಿ ।। 


ಜನ್ಮ ಜನ್ಮಂಗಳಲಿ ತಂದೆ ।

ಎಂದೆಂದು ಭವ-

ಮೋಚನದೊಳು ತಂದೆ ।

ಇಂದು ವಿನಯದಿ ತಂದೆ ।।

ದಂದುಗೆ ಬಿಡಿಸೆಂದೇ ।

ನಿನ್ನ ಹೃನ್ಮ೦ದಿರಾ-

ರವಿಂದದೊಳು ನಿಂದೆ ।। ಚರಣ ।। 


ಕಾಲ ಕಾಲದಿ ತಂದೆ ।

ವಾಕು ಮನಕೆ 

ನಿಲುಕದಾಲಿಹೇ ತಂದೆ ।

ಬಾಲ್ಯ ಯೌವನ । ಜ ।।

ರಾಲಯಾದ್ಯವಸ್ಥೆಯ ತಂದೆ ।

ಕಾಲ ಕರ್ಮಗಳಲ್ಲಿ ಕಾರ್ಯ 

ಪ್ರೇರಣೆಗೆಲ್ಲ ।। ಚರಣ ।। 


ಚತುರ ರೂಪದಿ ನಿಂದೆ ।

ತಂದೆ ಚತುರ 

ರೂಪದಿ ತಂದೆ ।

ನುತಿಪೆನೋ ಉರಗಾದ್ರಿ-

ವಾಸವಿಠ್ಠಲ । ಅ ।

ಪ್ರತಿಮಹಿಮಾ ಸೃಷ್ಠಿ 

ಸ್ಥಿತಿ ಲಯಕೆಲ್ಲ ।। ಚರಣ ।। 

***