Showing posts with label ವಂದಿಸಿದರೆ ವಂದ್ಯರು ಪೂಜಿತರು ankita prasannavenkata VANDISIDARE VANDYARU POOJITARU. Show all posts
Showing posts with label ವಂದಿಸಿದರೆ ವಂದ್ಯರು ಪೂಜಿತರು ankita prasannavenkata VANDISIDARE VANDYARU POOJITARU. Show all posts

Saturday, 10 April 2021

ವಂದಿಸಿದರೆ ವಂದ್ಯರು ಪೂಜಿತರು ankita prasannavenkata VANDISIDARE VANDYARU POOJITARU

Audio by Vidwan Sumukh Moudgalya
 


ಶ್ರೀ ಪ್ರಸನ್ನವೆಂಕಟದಾಸರ ನವ ಭಕ್ತಿ ಕೀರ್ತನೆಗಳು 


 ೬ . " ವಂದನಾ ಭಕ್ತಿ "


 ರಾಗ : ಶ್ರೀರಂಜನಿ   ತಿಶ್ರನಡೆ


ವಂದಿಸಿದರೆ ವಂದ್ಯರು ಪೂಜಿತರು

ಮುಕ್ಕುಂದ ಗೋವಿಂದ ಶ್ರೀಹರಿಯನ್ನು ॥ಪ॥


ಎಂದೆಂದು ಕುಂದದಾನಂದವೈದಿಸುವ

ಇಂದಿರೆಯರಸ ಭವಬಂಧಮೋಚಕನ ॥ಅ.ಪ॥


ಹತ್ತಶ್ವಮೇಧಾವಭೃಥಸ್ನಾನ ಮಾಡಲು

ಮರ್ತ್ಯರ್ಗೆ ಪುನರ್ಜನ್ಮಗಳಿಲ್ಲವು

ಸತ್ಯಭಾಮಾಧವಗೆ ನಿಷ್ಕಾಮದಿ ನಮಿಸಿ

ಮತ್ತೊಮ್ಮೆ ಮುಕ್ತಿಗೆ ಸಾಧನ ॥೧॥


ಕೋಟಿಸಹಸ್ರ ತೀರ್ಥಗಳಲ್ಲಿ ಮಿಂದು

ಕೋಟಿಸಹಸ್ರ ವ್ರತಗಳಾಚರಿಸೆ

ಕೈಟಾಭಾಂತಕಗೆ ನಮಿಸಿದ ಫಲಕೆ ಸರಿ

ಪಾಸಟಿ ಷೋಡಷ ಕಳೆಯೊಳೊಂದಲ್ಲ ॥೨॥


ಹೇಳನೆಯಿಂದಾದರು ನಮಿಸಿ ಶ್ರೀ -

ಲೋಲ ಸಾರಂಗಪಾಣಿಯನು

ಸಾಲು ಜನ್ಮದಘವ ಹಾಳುಮಾಡಿ ಮುಕ್ತಿ

ವಾಲಗಕೆ ಕರೆವ ವೈಷ್ಣವ ಜನರ ॥೩॥


ಉರಶಿರದೃಷ್ಟಿಲಿ ಮನವಾಚದಲಿ

ಚರಣ ಕರಗಳು ಜಾನುಗಳಲಿ

ಧರೆಯಲಿ ಅಷ್ಟಾಂಗ ಪ್ರಣಾಮ ಮಾಳ್ಪರ್ಗೆ

ಹರಿದು ಹೋಗಿ ಪಾಪ ವರಮುಕ್ತಿ ಈವ ॥೪॥


ಸರುವಾಂಗವ ಧರಿಗ್ಹೊಂದಿಸಿ ಭಕುತಿಲಿ

ಹೊರಳಾಡಿ ಭೂಮಿಲಿ ಪರವಶದಿ

ಹರಿಗೆ ನಮಿಸಲು ಮೈಗೊರೆವ ಧೂಳಿಯ ಕಣಾ

ಪರಿಮಿತ ಸಹಸ್ರಾಬ್ಜ ಪರಮಾಣ ಪದವಕ್ಕು ॥೫॥


ಸಿರಿ ಅಜಭವೇಂದ್ರ ಸುರರು ಮಹಾಮುನಿ ನಿ-

ಕರ ನೃಪಮನುಜೋತ್ತಮರೆಲ್ಲ

ಪರಮ ಭಕುತಿಲೆ ನಮಿಸೆ ಹರಿವಶನಾಗುವ

ಹರಿಜನಕೆ ಮುಕ್ತಿಪಥಕಿದೆ ಪಾಥೇಯ ॥೭॥


ಅರ್ಚಿತ ಕೃಷ್ಣನ್ನ ನೋಡುತಾನಂದಾಶ್ರು

ಹುಚ್ಚನಂತೆ ನಮಿಸಿ ನಗುತ ಸುರಿಸಿ

ಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯ

ನಿಚ್ಚ ಪ್ರಸನ್ವೆಂಕಟ ನೆಂದುಚ್ಚರಿಸಿ ॥೮॥

*******